ಬಿಜೆಪಿಯ ಮತ್ತೊಂದು ತಂಡದಿಂದ ಇಂದು `ಧರ್ಮಸ್ಥಳ ಚಲೋ’ – 500 ಕಾರುಗಳಲ್ಲಿ ಹೊರಟ ಕಾರ್ಯಕರ್ತರು

ಬೆಂಗಳೂರು: ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿಯ (BJP) ಮತ್ತೊಂದು ತಂಡ ಇಂದು (ಆ.21) ಧರ್ಮಸ್ಥಳ ಚಲೋ (Dharmasthala Chalo) ರ‍್ಯಾಲಿ ಹಮ್ಮಿಕೊಂಡಿದೆ. ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಘಟಕ ಕೊಡಿಗೆಹಳ್ಳಿ ಗೇಟ್‌ನ ಗುಂಡಾಂಜನೇಯ ದೇವಸ್ಥಾನದಿಂದ ಈ ರ‍್ಯಾಲಿ ಹೊರಟಿದೆ. ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಬಿಜೆಪಿ ಜಿಲ್ಲಾಧ್ಯಕ್ಷ ಎಸ್ ಹರೀಶ್ ನೇತೃತ್ವದಲ್ಲಿ ಈ ರ‍್ಯಾಲಿ ನಡೆಯುತ್ತಿದೆ.

ಸುಮಾರು 500ಕ್ಕೂ ಹೆಚ್ಚು ವಾಹನಗಳಿಂದ ಯಾತ್ರೆ ಆರಂಭ ಮಾಡಲಾಗಿದೆ. ಗುಂಡಾಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಕೆ ಮಾಡಿ ಯಾತ್ರೆ ಆರಂಭ ಮಾಡಲಾಯಿತು. ಈ ಬಗ್ಗೆ ಬಿಜೆಪಿ ಮುಖಂಡ ತಮ್ಮೇಶ್ ಗೌಡ ಮಾತನಾಡಿ, ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಸಹಿಸೋದಿಲ್ಲ. ನಾವು ಧರ್ಮಯಾತ್ರೆ ಮಾಡ್ತಿದ್ದೇವೆ. ಧರ್ಮಸ್ಥಳಕ್ಕೆ ಹೋಗಿ ಅಲ್ಲಿ ಒಂದು ಸಭೆ ಮಾಡ್ತೇವೆ. ಅನಂತರ ಮಂಜುನಾಥನ ದರ್ಶನ ಪಡೆಯುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಅನನ್ಯಾ ಭಟ್ ಕೇಸ್ ಎಸ್‌ಐಟಿಗೆ ಹಸ್ತಾಂತರ

ಎಸ್ಐಟಿ ತನಿಖೆ ಮಾಡಲಿ ಅದಕ್ಕೇನು ಸಮಸ್ಯೆಯಿಲ್ಲ. ಅದರೆ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಸಹಿಸೋದಿಲ್ಲ. ನಮ್ಮ ಧರ್ಮದ ಮೇಲೆ ಎಷ್ಟೋ ಅಪಪ್ರಚಾರಗಳು ಮೊದಲಿನಿಂದಲೂ ಅಗಿದೆ. ಅದ್ರೆ ನಮ್ಮ ಧರ್ಮ ಅದಕ್ಕೆಲ್ಲ ಜಗ್ಗಿಲ್ಲ. ಈಗಾಗಲೇ ಅಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಗೊತ್ತು. ಇದರ ಹಿಂದೆ ನಡೆಯುತ್ತಿರುವ ಷಡ್ಯಂತ್ರದ ಬಗ್ಗೆ ಗೊತ್ತಾಗಬೇಕು. ನಾವು ಧರ್ಮಸ್ಥಳದ ಜೊತೆಗೆ ಇದ್ದೇವೆ ಎಂದರು.

ಈಗಾಗಲೇ ಬಿಜೆಪಿಯಿಂದ ಎರಡು ತಂಡಗಳು ಧರ್ಮಸ್ಥಳದ ಪರ ರ‍್ಯಾಲಿ ನಡೆಸಿದ್ದವು. ಬಿಜೆಪಿ ಶಾಸಕ ವಿಶ್ವನಾಥ್‌ ನೇತೃತ್ವದ ತಂಡ ಹಾಗೂ ವಿಜಯೇಂದ್ರ ನೇತೃತ್ವದ ತಂಡ ಭೇಟಿ ನೀಡಿ, ಧರ್ಮಾಧಿಕಾರಿಗಳ ಜೊತೆ ಹಾಗೂ ಧರ್ಮಸ್ಥಳ ಕ್ಷೇತ್ರದ ಜೊತೆ ನಿಲ್ಲುವುದಾಗಿ ಬೆಂಬಲ ಸೂಚಿಸಿತ್ತು. ಇದನ್ನೂ ಓದಿ: ನಾನು ಹಣಕ್ಕಾಗಿ ಹೀಗೆ ಮಾಡಿಲ್ಲ, ಮಗಳು ಇಲ್ಲ ಅಂತ ಕೊರಗುತ್ತಿದ್ದೀನಿ: ಸುಜಾತಾ ಭಟ್ ಕಣ್ಣೀರು