ನಾನು ಸಂಪುಟ ಸೇರ್ಪಡೆಯಾಗುವುದು ಕೇವಲ ಉಹಾಪೋಹ, ನನಗೆ ಯಾವುದೇ ಆಸೆಯಿಲ್ಲ: ಬಿ.ವೈ.ವಿಜಯೇಂದ್ರ

by vijayendra

ಹುಬ್ಬಳ್ಳಿ: ನಾನು ಸಂಪುಟ ಸೇರ್ಪಡೆಯಾಗುವುದು ಕೇವಲ ಉಹಾಪೋಹ. ನಾನು ಉಪಾಧ್ಯಕ್ಷನಾಗಿ ಪಕ್ಷ ಸಂಘಟನೆ ಕೆಲಸ ಮಾಡ್ತೆನೆ. ನಾನು ಯಾವುದೇ ಆಸೆಯಿಂದ ಕೆಲಸ ಮಾಡ್ತಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟನೆ ಕೊಟ್ಟರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ರಾಜ್ಯ, ಕೇಂದ್ರನಾಯಕರ ಹತ್ತಿರ ಈ ಕುರಿತು ಯಾವುದೇ ಚರ್ಚೆ ಆಗಿಲ್ಲ. ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿದ್ದು, ನನ್ನ ವೈಯಕ್ತಿಕ ಕೆಲಸಕ್ಕೆ. ಇದರ ಜೊತೆಗೆ ಪಕ್ಷದ ಸಂಘದ ವಿಚಾರವಾಗಿ ಚರ್ಚೆ ನಡೆಸಿದ್ದೇನೆ ಎಂದರು. ಇದನ್ನೂ ಓದಿ: ರಾಯಚೂರಿನಲ್ಲಿ ‘ಅಪ್ಪು ಅಂಗನವಾಡಿ ಕೇಂದ್ರ’ ಲೋಕಾರ್ಪಣೆ – ಶಿವಣ್ಣನಿಂದ ಮೆಚ್ಚುಗೆ

ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ನಾವು ಅಭೂತಪೂರ್ವ ಗೆಲುವು ಸಾಧಿಸಿದ್ದೇವೆ. ಕಾಂಗ್ರೆಸ್ ಮುಂದೆ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಭ್ರಮೆಯಲ್ಲಿದ್ದರು. ಅವರಿಗೆ ಆಘಾತವಾಗಿದೆ. ಬಿಜೆಪಿ ಗೆಲುವು ಕಾಂಗ್ರೆಸ್ ನಿದ್ದೆಗೆಡಿಸಿದ್ರೆ, ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತರಿಸಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *