ಚಿಕ್ಕಬಳ್ಳಾಪುರ: ಕರ್ನಾಟಕ ರಾಜಕಾರಣ ನಾಳೆಯಿಂದ ಕುರುಕ್ಷೇತ್ರ ಆಗುತ್ತೆ. ಮೂರು-ನಾಲ್ಕು ದಿನದಲ್ಲಿ ಬಿಜೆಪಿ ನಾಯಕ ಯಡಿಯೂರಪ್ಪ ಸಿಎಂ ಆಗ್ತಾರೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಬಿ.ಎನ್ ಬಚ್ಚೇಗೌಡ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಂದು, ಎರಡು, ಮೂರು, ನಾಲ್ಕು ಅಂತ ಎಣಿಸಿ ನೋಡಿ. ನಾಳೆಯಿಂದ ಕರ್ನಾಟಕ ರಾಜಕಾರಣ ಕುರುಕ್ಷೇತ್ರ ಆಗುತ್ತೆ. ಯಡಿಯೂರಪ್ಪ ಈ ಕುರುಕ್ಷೇತ್ರದಲ್ಲಿ ಗೆಲ್ಲುತ್ತಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ಪ್ರಧಾನಿ ಆಗಬೇಕು ಎಂಬುದು ನನ್ನ ಆಸೆ ಅದು ನೆರವೇರುತ್ತಿದೆ. ಈಗ ಯಡಿಯೂರಪ್ಪ ಸಿಎಂ ಅಗಬೇಕು ಎಂಬುದೇ ನನ್ನ ಆಸೆಯಾಗಿದೆ. ಎರಡು ಮೂರು ದಿನ ಕಾದು ನೋಡಿ ಯಡಿಯೂರಪ್ಪ ಸಿಎಂ ಅಗ್ತಾರೆ ಎಂದರು. ಇದೇ ವೇಳೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮಾಧ್ಯಮಗಳ ಎಕ್ಸಿಟ್ ಪೋಲ್ ಸಮೀಕ್ಷೆಗೆ ಬಚ್ಚೇಗೌಡರು ಪ್ರಶಂಸೆ ವ್ಯಕ್ತಪಡಿಸಿದರು.

Leave a Reply