ರಾಜ್ಯದಲ್ಲಿ ರಂಗೇರಿದ ಬೈಎಲೆಕ್ಷನ್ ಅಖಾಡ- ಮಂಡ್ಯದಲ್ಲಿ ಬಿಎಸ್‍ವೈ, ಎಚ್‍ಡಿಕೆ ಪ್ರಚಾರ

ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಸಿಎಂ ಹಾಗೂ ಹಾಲಿ ಸಿಎಂ ಪ್ರಚಾರ ನಡೆಸಲಿದ್ದಾರೆ. 11 ಗಂಟೆಗೆ ಆಗಮಿಸಲಿರುವ ಸಿಎಂ ಕುಮಾರಸ್ವಾಮಿ ದೋಸ್ತಿ ಅಭ್ಯರ್ಥಿ ಶಿವರಾಮೇಗೌಡ ಪರ ಮಳವಳ್ಳಿ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದಲ್ಲಿ ಮತಯಾಚಿಸಲಿದ್ದಾರೆ.

ಸಭೆಯಲ್ಲಿ ಮಂಡ್ಯದ ಕಾಂಗ್ರೆಸ್ ಮುಖಂಡರು ಭಾಗವಹಿಸುತ್ತಾ..? ಇಲ್ವಾ..? ಅನ್ನೋ ಗೊಂದಲ ಶುರುವಾಗಿದೆ. ಇನ್ನು ಹನ್ನೊಂದೂವರೆಗೆ ಜೆಡಿಎಸ್ ಭದ್ರಕೋಟೆಗೆ ಲಗ್ಗೆಯಿಡಲಿರುವ ಬಿಎಸ್ ಯಡಿಯೂರಪ್ಪ ಡಾ.ಸಿದ್ದರಾಮಯ್ಯ ಪರ ಪ್ರಚಾರ ಮಾಡಲಿದ್ದಾರೆ.

ನಾಗಮಂಗಲ, ಮದ್ದೂರು, ಕೆಎಂ ದೊಡ್ಡಿ, ಮಳವಳ್ಳಿಯಲ್ಲಿ ಸಂಚರಿಸಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಲಿದ್ದಾರೆ. ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಸಂಸದ ಡಿಕೆ ಸುರೇಶ್ ಜೊತೆಗೂಡಿ ಜಂಟಿ ಪ್ರಚಾರ ಮಾಡ್ತಿದ್ದಾರೆ. ಇತ್ತ ಬಿಜೆಪಿಯ ಚಂದ್ರಶೇಖರ್ ಕೆಂಪನಹಳ್ಳಿಯಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಲಿದ್ದಾರೆ. ಇಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಿಪಿ ಯೋಗೇಶ್ವರ್ ಕೂಡಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *