ಡ್ರಗ್ಸ್ ಸೇವಿಸಿ ಸ್ಯಾಂಡಲ್‍ವುಡ್ ಖ್ಯಾತ ನಟರ ರಾದ್ಧಾಂತ – ಸಿಕ್ಕಸಿಕ್ಕವರಿಗೆ ಗುದ್ದಿ ಆಕ್ಸಿಡೆಂಟ್

– ಬೆಂಜ್ ಕಾರಲ್ಲಿತ್ತು ಗಾಂಜಾ
– ಸಾರ್ವಜನಿಕರಿಂದ ಉದ್ಯಮಿ ಮೊಮ್ಮಗನಿಗೆ ಹಿಗ್ಗಾಮಗ್ಗಾ ಥಳಿತ

ಬೆಂಗಳೂರು: ಸ್ಯಾಂಡಲ್‍ವುಡ್ ಖ್ಯಾತ ನಟರು ಡ್ರಗ್ಸ್ ಸೇವಿಸಿ ಸಿಕ್ಕಸಿಕ್ಕವರಿಗೆ ಕಾರಿನಿಂದ ಗುದ್ದಿರೋ ಘಟನೆ ಬೆಂಗಳೂರಿನ ಸೌತ್ ಎಂಡ್ ಸರ್ಕಲ್‍ನಲ್ಲಿ ನಡೆದಿದೆ.

ನಟರು ಉದ್ಯಮಿ ಮೊಮ್ಮಗನ ಜೊತೆ ಗಾಂಜಾ ಸೇವಿಸಿ ಆಕ್ಸಿಡೆಂಟ್ ಮಾಡಿದ್ದು, ಸಾರ್ವಜನಿಕರಿಂದ ಗೂಸಾ ಬೀಳ್ತಿದ್ದಂತೆ ಮುಖ ಮುಚ್ಕೊಂಡು ಎಸ್ಕೇಪ್ ಆಗಿದ್ದಾರೆ.

 

ಲಾಲ್‍ಬಾಗ್ ರಸ್ತೆ ಮೂಲಕ ಬಂದ ಟಾಪ್ ಹೀರೋಗಳಿದ್ದ ಆ ಬೆಂಜ್ ಕಾರು ಮೊದಲು ರಸ್ತೆ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬಿಬಿಎಂಪಿ ಬೋರ್ಡ್ ಅಷ್ಟೇ ಅಲ್ಲ, ಫುಟ್‍ಪಾತ್‍ಗೆ ಹಾಕಿದ್ದ ಕಬ್ಬಿಣದ ಗ್ರಿಲ್‍ಗಳೇ ಮುರಿದುಹೋಗಿವೆ.

 

ವಿದ್ಯುತ್ ಕಂಬ, ಓಮ್ನಿ ಕಾರ್ ಹಾಗೂ ಇತರೆ ವಾಹನಗಳಿಗೂ ಡಿಕ್ಕಿ ಹೊಡೆದಿದ್ದು, ಸಿಕ್ಕಸಿಕ್ಕವರಿಗೆಲ್ಲಾ ಗುದ್ದಿ ಪರಾರಿಯಾಗಿದ್ದಾರೆ. ಇವರ ಆಟಾಟೋಪದಿಂದ ತಾಳ್ಮೆಗೆಟ್ಟ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಉದ್ಯಮಿಯ ಮೊಮ್ಮಗನಿಗೆ ಒದೆ ಬೀಳುತ್ತಲೇ ಆ `ಸ್ಟಾರ್’ಗಳು ಎಸ್ಕೇಪ್ ಆಗಿದ್ದಾರೆ.

ಇಷ್ಟೆಲ್ಲಾ ಆದ್ಮೇಲೆ ಬೆಂಜ್ ಸೀಜ್ ಮಾಡಿದ ಪೋಲೀಸರಿಗೆ ಶಾಕ್ ಕಾದಿತ್ತು. ಕಾರ್‍ನಲ್ಲಿ ಕೋಟಿ ಮೌಲ್ಯದ ಮಾದಕ ದ್ರವ್ಯ ಪತ್ತೆಯಾಗಿದೆ. ಇಷ್ಟಾದರೂ ಪೊಲೀಸರು ಮಾತ್ರ ಎಫ್‍ಐಆರ್ ದಾಖಲಿಸಿಲ್ಲ.

ಒದೆ ತಿಂದ ಉದ್ಯಮಿ ಮೊಮ್ಮಗ ಆಸ್ಪತ್ರೆಯಲ್ಲಿ ಟ್ರೀಟ್‍ಮೆಂಟ್ ಪಡೆದು ಎಸ್ಕೇಪ್ ಆಗಿದ್ದಾನೆ. ಹಿಟ್ ಅಂಡ್ ರನ್‍ನಿಂದ ಗಾಯಗೊಂಡವರಿಗೆ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

Comments

Leave a Reply

Your email address will not be published. Required fields are marked *