ಬಸ್ಸಿನ ಹಿಂಭಾಗದಲ್ಲಿ ಕುಳಿತು ಸರ್ಕಸ್ ಮಾಡಿದ್ದ ವಿದ್ಯಾರ್ಥಿ ಸಸ್ಪೆಂಡ್

ಮಂಗಳೂರು: ವಿದ್ಯಾರ್ಥಿಯೊಬ್ಬ ಬಸ್ಸಿನ ಹಿಂಭಾಗದಲ್ಲಿ ಕುಳಿತುಕೊಂಡು ಸರ್ಕಸ್ ನಡೆಸಿದೆ ಘಟನೆ ಮಂಗಳೂರಿನ ಮೂಡುಬಿದ್ರೆಯಲ್ಲಿ ನಡೆದಿದ್ದು, ಇದೀಗ ವಿದ್ಯಾರ್ಥಿ ಕಾಲೇಜಿನಿಂದ ಸಸ್ಪೆಂಡ್ ಆಗಿದ್ದಾನೆ.

ಬಸ್ಸಿನಲ್ಲಿ ವಿದ್ಯಾರ್ಥಿಗಳು ಸ್ಟೆಪ್‍ನಲ್ಲಿ ನೇತಾಡಿಕೊಂಡು ಹೋಗುವುದು ಸಾಮಾನ್ಯ. ಆದರೆ ಮೂಡುಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸ್ಕೂಲ್ ಬಸ್ಸಿನಲ್ಲಿ ವಿದ್ಯಾರ್ಥಿಯೊಬ್ಬ ಬಸ್ ಹಿಂಭಾಗದಲ್ಲಿ ಕುಳಿತಿದ್ದನು. ರಸ್ತೆಯಲ್ಲಿ ವೇಗವಾಗಿ ಚಲಿಸುವ ಬಸ್ಸಿನಲ್ಲಿ ಹೀಗೆ ಕುಳಿತು ತೆರಳುತ್ತಿದುದ್ದನ್ನು ಸಾರ್ವಜನಿಕರು ಗಮನಿಸಿ ವಿಡಿಯೋ ಮಾಡಿ ಹರಿಯಬಿಟ್ಟಿದ್ದಾರೆ.

ಒಂದು ವೇಳೆ ವಿದ್ಯಾರ್ಥಿ ಆಯ ತಪ್ಪಿ ಬಸ್ಸಿನಿಂದ ಬಿದ್ದಿದ್ದರೆ ಹಿಂಭಾಗದಲ್ಲಿ ಬರುವ ವಾಹನಗಳ ಅಡಿಗೆ ಬೀಳುವ ಸಾಧ್ಯತೆ ಇತ್ತು. ಈತನ ಹುಚ್ಚು ಸಾಹಸ ಬಸ್ ಚಾಲಕನ ಗಮನಕ್ಕೆ ಬರಲಿಲ್ಲ. ಈ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಂತರ ಈ ವಿಡಿಯೋ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳ ಬರುತ್ತಿದ್ದಂತೆ ಎಚ್ಚೆತ್ತ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಯ ಪೋಷಕರನ್ನು ಕರೆಸಿ ಕಾಲೇಜಿನಿಂದ ಸಸ್ಪೆಂಡ್ ಮಾಡಿಸಿದ್ದಾರೆ.

ಇಂತಹ ಸಾಹಸಗಳನ್ನು ಇನ್ಯಾವ ವಿದ್ಯಾರ್ಥಿಯೂ ಮಾಡದಂತೆ ಕಾಲೇಜು ಎಚ್ಚರಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಕುರಿಯನ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *