ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಭರಾಟೆ ಜೋರಾಗಿರುವಂತೆ ಜನರಿಗೆ ಬಸ್ ದರದ ಬಿಸಿ ತಾಗಿದೆ. ಎಲೆಕ್ಷನ್ ಹಿನ್ನೆಲೆಯಲ್ಲಿ ಮತದಾನದ ಮುನ್ನಾದಿನವಾದ ಏಪ್ರಿಲ್ 17 ಹಾಗೂ ಏಪ್ರಿಲ್ 22 ರಂದು ತಮ್ಮ ತಮ್ಮ ಊರುಗಳಿಗೆ ತೆರಳುವವರು ದುಪ್ಪಟ್ಟು ಹಣ ತೆರಬೇಕಾದ ಪರಿಸ್ಥಿತಿ ಎದುರಾಗಿದೆ.
ಈ 2 ದಿನಗಳಂದು ರಾಜಕೀಯ ಮುಖಂಡರು ಈಗಾಗಲೇ ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಬಸ್‍ಗಳನ್ನು ಬುಕ್ ಮಾಡಿಕೊಂಡಿದ್ದಾರೆ. ಇದರಿಂದ ಇನ್ನಷ್ಟು ಡಿಮ್ಯಾಂಡ್ ಕ್ರಿಯೆಟ್ ಆಗಿದ್ದು ಬಸ್ ದರ ಸಿಕ್ಕಾಪಟ್ಟೆ ಏರಿಕೆಯಾಗಿದೆ.

ಯಾವ್ಯಾವ ಊರುಗಳಿಗೆ ಎಷ್ಟೆಷ್ಟು ಏರಿಕೆ?:
ಬೆಂಗಳೂರಿನಿಂದ ಉಡುಪಿಗೆ ತೆರಳಲು ಬಸ್ಸಿನ ಸಾಮಾನ್ಯ ದರ 900 ಆಗಿದ್ದು, ಚುನಾವಣೆಯ ಹಿನ್ನೆಲೆಯಲ್ಲಿ ಮತದಾನದ ಮುನ್ನಾ ದಿನ ತೆರಳಿದ್ರೆ ಅದರ ದರ 1,500ರೂ.ಗೆ ಏರಿಕೆ ಮಾಡಲಾಗಿದೆ.
ಬೆಂಗಳೂರಿನಿಂದ ಬೆಳಗಾವಿಗೆ ಪ್ರಸ್ತುತ ಬಸ್ ದರ 1,000 ಆಗಿದ್ದು, ಲೋಕಸಭಾ ಚುನಾವಣೆಯ ಮತದಾನದ ಮುಂದಿನ ದಿನ ತೆರಳಬೇಕಾದ್ರೆ 2000 ರೂ. ಟಿಕೆಟ್ ತೆಗೆದುಕೊಳ್ಳಲೇಬೇಕಾಗಿದೆ. ಹಾಗೆಯೇ ಶಿವಮೊಗ್ಗಕ್ಕೆ ತೆರಳಬೇಕಾದ್ರೆ ಪ್ರಸ್ತುತ ದರ 500 ಆಗೊದೆ. ಆದ್ರೆ ಚುನಾವಣೆ ಮೊದಲನೇ ದಿನ ತೆರಳಬೇಕಾದ್ರೆ 1,200 ರೂ. ಕೊಟ್ಟು ಟಿಕೆಟ್ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ಹುಬ್ಬಳ್ಳಿಗೆ ತೆರಳಲು ಪ್ರಸ್ತುತ ಬಸ್ಸಿನ ದರ 1,000 ಆಗಿದ್ದು, 2,000ಕ್ಕೆ ಏರಿಕೆ ಮಾಡಲಾಗಿದೆ. ಹಾಗೆಯೇ ಮೈಸೂರಿಗೆ ಬಸ್ ಟಿಕೆಟ್ ದರ ಪ್ರಸ್ತುತ 300 ಆಗಿದ್ದು, 700ಕ್ಕೆ ಏರಿಸಲಾಗಿದೆ.
ಒಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡಲು ತೆರಳಲುವ ಪ್ರಯಾಣಿಕರಿಗೆ ಬಸ್ ದರ ಏರಿಕೆ ಮಾಡುವ ಮೂಲಕ ಖಾಸಗಿ ಬಸ್ಸುಗಳು ಶಾಕ್ ಕೊಟ್ಟಿದೆ ಎಂದು ಪ್ರಯಾಣಿಕ ರಾಘವೇಂದ್ರ ಹೇಳುತ್ತಾರೆ.

Leave a Reply