ಬೀಜಿಂಗ್: ಪ್ರಯಾಣಿಕ ಮತ್ತು ಬಸ್ ಚಾಲಕನ ಕಿತ್ತಾಟದಿಂದ ಬಸ್ಸೊಂದು ಸೇತುವೆಯಿಂದ ನದಿಗೆ ಬಿದ್ದ ಪರಿಣಾಮ 13ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಚೀನಾದಲ್ಲಿ ನಡೆದಿದೆ.
ಸ್ಥಳಿಯ ಸರ್ಕಾರಿ ಸಂಸ್ಥೆಯೊಂದು ಬಿಡುಗಡೆ ಮಾಡಿದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

ಈ ವಿಡಿಯೋದ ಮೊದಲ ಭಾಗದಲ್ಲಿ ಚಾಲಕನ ಜೊತೆ ಪ್ರಯಾಣಿಕನೊಬ್ಬ ತನ್ನ ನಿಲ್ದಾಣದಲ್ಲಿ ಬಸ್ ನಿಲ್ಲಿಸದ್ದು ಯಾಕೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾನೆ. ಈ ವಿಚಾರದ ಬಗ್ಗೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಪ್ರಯಾಣಿಕ ಚಾಲಕನಿಗೆ ಹೊಡೆಯುವ ದೃಶ್ಯ ಬಸ್ ಒಳಗಡೆಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಚಾಲಕನೂ ಸಹ ಆ ಪ್ರಯಾಣಿಕನಿಗೆ ಹೊಡೆದಿದ್ದಾನೆ.
ಎರಡನೆಯ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇಬ್ಬರ ಜಗಳದಿಂದ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಸೇತುವೆಗೆ ಗುದ್ದಿ ನದಿಗೆ ಬಿದ್ದಿದೆ.

ಈ ಘಟನೆಯಲ್ಲಿ ಬದುಕುಳಿದಿರುವವರ ಸಾಧ್ಯತೆ ಕಡಿಮೆ ಎಂದು ಪೊಲೀಸರು ತಿಳಿಸಿದ್ದು, ಇಲ್ಲಿಯವರೆಗೆ 13 ಮಂದಿಯ ಮೃತ ದೇಹವನ್ನು ನದಿಯಿಂದ ಹೊರ ತೆಗೆಯಲಾಗಿದೆ. ಇನ್ನುಳಿದ ಇಬ್ಬರು ಪ್ರಯಾಣಿಕರ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://youtu.be/RnbsRuaEfvI

Leave a Reply