ಚೆನ್ನೈನಲ್ಲಿ ಬಾಯಿಬಿಟ್ಟ ಭೂಮಿ: ರಸ್ತೆಯಲ್ಲಿ ಸಿಲುಕಿದ ಬಸ್, ಕಾರು

ಚೆನ್ನೈ: ತಮಿಳುನಾಡು ರಾಜಧಾನಿ ಚೆನೈನ ಅಣ್ಣಾ ಸಾಲೈ, ಅಮೆರಿಕ ರಾಯಭಾರಿ ಕಚೇರಿ ಬಳಿ ಮೆಟ್ರೋ ಸುರಂಗ ಕಾಮಗಾರಿ ನಡೆಯುತ್ತಿದ್ದ ವೇಳೆ ಭಾನುವಾರ ಮಧ್ಯಾಹ್ನ 2 ಗಂಟೆಯ ವೇಳೆ ಭೂ ಕುಸಿತ ಉಂಟಾಗಿದೆ.

ಇದರಿಂದಾಗಿ ತಮಿಳುನಾಡು ಸರ್ಕಾರಿ ಬಸ್ ಮತ್ತು ಹೊಂಡಾ ಸಿಟಿ ಕಾರು ರಸ್ತೆಯಲ್ಲಿ ಸಿಲುಕಿದೆ. ಜನರು ಅಪಾಯದಿಂದ ಪಾರಾಗಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ.

ಮೆಟ್ರೊ ಕಾಮಗಾರಿ ವೇಳೆ ಕಂಪನದಿಂದ ರಸ್ತೆಯಲ್ಲಿ ಮಣ್ಣು ಸಡಿಲಗೊಂಡು ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಘಟನೆಯಿಂದ ಕೆಲ ಹೊತ್ತು ಟ್ರಾಫಿಕ್ ಜಾಮ್ ಆಗಿ ಆತಂಕ ಮೂಡಿತ್ತು.

ಟ್ರಾಫಿಕ್ ಪೊಲೀಸರು ಈಗ ರಸ್ತೆಯ ಮಾರ್ಗವನ್ನು ಬದಲಾಯಿಸಿದ್ದು, ಸಂಚಾರ ಸುಗಮವಾಗಿದೆ. ತಮಿಳುನಾಡು ಸಾರಿಗೆ ಸಚಿವ ಡಿ ಜಯಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲಿಸಿದ್ದಾರೆ. ನಂತರ ಪ್ರತಿಕ್ರಿಯಿಸಿದ ಅವರು, 2009ರಿಂದ ಮೆಟ್ರೋ ಕಾಮಗಾರಿ ನಗರದಲ್ಲಿ ಆರಂಭಗೊಂಡಿದ್ದು, ಮೊದಲ ಬಾರಿಗೆ ಈ ರೀತಿ ಕುಸಿತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಕ್ರೇನ್ ಸಹಾಯದಿಂದ ಬಸ್ ಮತ್ತು ಕಾರನ್ನು ಈಗ ಮೇಲಕ್ಕೆ ಎತ್ತಲಾಗಿದೆ.

ಬಸ್ಸಿನ ಟಯರ್ ಪಂಚರ್ ಆಗಿರಬಹುದು ಎಂದು ನಾನು ಭಾವಿಸಿದ್ದೆ. ಕೆಳಗೆ ಇಳಿದು ನೋಡಿದಾಗ ಬಸ್ ರಸ್ತೆಯಲ್ಲಿ ಸಿಲುಕಿತ್ತು. ಕೂಡಲೇ ಈ ಪ್ರಯಾಣಿಕರಿಗೆ ತಿಳಿಸಿದೆ. ಅವರೆಲ್ಲರೂ ಕೆಳಗಡೆ ಇಳಿದರು ಎಂದು ಬಸ್ ಚಾಲಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

 

Comments

Leave a Reply

Your email address will not be published. Required fields are marked *