ಕರ್ನಾಟಕದಲ್ಲೂ ಬುಲ್ಡೋಜರ್ ಕಾರ್ಯಾಚರಣೆಗೆ ಹೆಚ್ಚಿದ ಒತ್ತಡ: ಬಿಜೆಪಿಯಲ್ಲಿ ಭಿನ್ನ ನಿಲುವು

ಬೆಂಗಳೂರು: ಬುಲ್ಡೋಜರ್ ಆಕ್ಷನ್ ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್ ಆಯ್ತು ಈಗ ರಾಷ್ಟ್ರ ರಾಜಧಾನಿ ದೆಹಲಿ ಸರದಿ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಲ್ಡೋಜರ್ ಮಾಡೆಲ್ ಬಂದರೂ ಕರ್ನಾಟಕದಲ್ಲಿ ಏಕೆ ಜಾರಿ ಇಲ್ಲ ಎನ್ನುವುದರ ಬಗ್ಗೆ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

ಸದಾ ಕಾಲ ಎಲ್ಲದರಲ್ಲೂ ಬ್ಯಾಲೆನ್ಸ್ ಮಾಡುವ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲೂ ಬುಲ್ಡೋಜರ್ ಆರ್ಡರ್ ಮಾಡುತ್ತಿಲ್ಲ ಏಕೆ ಎನ್ನುವ ಪ್ರಶ್ನೆ ಆಡಳಿತ ಪಕ್ಷದಲ್ಲಿ ಎದ್ದಿದೆ.

ಈ ನಡುವೆ ಧರ್ಮ ದಂಗಲ್ ಹೆಸರಲ್ಲಿ ಆಸ್ತಿಪಾಸ್ತಿ ನಷ್ಟ ಉಂಟು ಮಾಡುವ ಕಿಡಿಗೇಡಿಗಳ ವಿರುದ್ಧ ಕಾರ್ಯಾಚರಣೆಗೆ ಹಿಂದೂ ಸಂಘಟನೆಗಳು ಒತ್ತಡ ಹಾಕಿವೆ. ಅಷ್ಟೇ ಅಲ್ಲ ಪಕ್ಷದಲ್ಲೂ ಒತ್ತಡ ಹೆಚ್ಚಿದೆ. ಕೆಲ ಸಚಿವರು, ಹಲವು ಬಿಜೆಪಿ ಶಾಸಕರು ಬುಲ್ಡೋಜರ್ ಕಾರ್ಯಾಚರಣೆ ಅಸ್ತ್ರ ಪ್ರಯೋಗಿಸಲು ಒತ್ತಾಯಿಸಿದ್ದಾರೆ. ಸಚಿವ ಸುನಿಲ್ ಕುಮಾರ್ ಬುಲ್ಡೋಜರ್ ಕಾರ್ಯಾಚರಣೆ ಬಗ್ಗೆ ಎಚ್ಚರಿಕೆ ಕೊಟ್ಟಿದ್ದರೆ, ಗೃಹ ಸಚಿವ ಆರಗ ಜ್ಞಾನೇಂದ್ರ ಬುಲ್ಡೋಜರ್ ಕಾರ್ಯಾಚರಣೆ ಬಗ್ಗೆ ಸಿಎಂ ಚಿಂತನೆ ಮಾಡುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಹೈಡ್ರಾಮಾ – ಸುಪ್ರೀಂನಿಂದ ತಡೆ ಆದೇಶ ಬಂದ ಬಳಿಕವೂ 2 ಗಂಟೆ ಘರ್ಜಿಸಿದ ಜೆಸಿಬಿ

ಹಾಗಾದರೆ ಸ್ವಪಕ್ಷೀಯರ ಒತ್ತಡಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮಣೆ ಹಾಕುವುದು ಯಾವಾಗ? ಚುನಾವಣೆ ಹೊತ್ತಲ್ಲಿ ಬುಲ್ಡೋಜರ್ ಸಾಹಸಕ್ಕೆ ಕೈ ಹಾಕಲು ಬೊಮ್ಮಾಯಿ ಹಿಂದೇಟು ಹಾಕ್ತಿದ್ದಾರಾ? ಎನ್ನುವ ಪ್ರಶ್ನೆ ಕೂಡ ಬೇರೆ ಬೇರೆ ರೀತಿಯಲ್ಲಿ ಚರ್ಚೆ ಆಗುತ್ತಿದೆ. ಬಸವರಾಜ ಬೊಮ್ಮಾಯಿ ನಡೆಗೆ ಜೈ ಎನ್ನುವಂತೆ ಎಲ್ಲಾ ಕಡೆಗಳಲ್ಲೂ ಬುಲ್ಡೋಜರ್ ಪ್ರಯೋಗ ಮಾಡಲು ಆಗಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೂಡ ಹೇಳಿದ್ದರು. ಹಾಗಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನಿಲುವೇ ಬಸವರಾಜ ಬೊಮ್ಮಾಯಿ ನಿಲುವಾಗುತ್ತಾ? ಇಲ್ಲ ಹೈಕಮಾಂಡ್ ಕೇಳಿ ರಾಜ್ಯದಲ್ಲೂ ಬುಲ್ಡೋಜರ್ ಕಾರ್ಯಾಚರಣೆಗೆ ಹೆಜ್ಜೆ ಇಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಮಾಸ್ಕ್ ಕಡ್ಡಾಯ – ಹಾಕದಿದ್ದರೆ 500 ರೂ. ದಂಡ

Comments

Leave a Reply

Your email address will not be published. Required fields are marked *