ಹಾಡಹಗಲೇ ಕೊಲೆ – ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಆಪ್ತನ ಮನೆ ನೆಲಸಮ

ಲಕ್ನೋ: ಉತ್ತರ ಪ್ರದೇಶದದಲ್ಲಿ (Uttar Pradesh) ಕೊಲೆ ಪ್ರಕರಣವೊಂದರ ಸಾಕ್ಷಿದಾರನ ಹತ್ಯೆಗೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ನ ಆಪ್ತನ ಮನೆಯನ್ನು ಬುಲ್ಡೋಜರ್‌ (Uttar Pradesh Bulldozer Operation) ಮೂಲಕ ನೆಲಸಮಗೊಳಿಸಲಾಯಿತು.

2005 ರಲ್ಲಿ ರಾಜಕಾರಣಿಯೊಬ್ಬರ ಹತ್ಯೆಯ ಸಾಕ್ಷಿ ವಕೀಲ ಉಮೇಶ್ ಪಾಲ್ ಎಂಬವರನ್ನು ಪ್ರಯಾಗ್‌ರಾಜ್‌ನಲ್ಲಿರುವ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಐವರು ನಡೆಸಿದ ಗುಂಡಿನ ದಾಳಿಯಲ್ಲಿ ವಕೀಲರ ಭದ್ರತಾ ಸಿಬ್ಬಂದಿಯೂ ಸಾವನ್ನಪ್ಪಿದ್ದರು. ಇದನ್ನೂ ಓದಿ: ಎಸ್‍ಪಿ ಶಾಸಕನ 7 ಕೋಟಿ ರೂ ಮೌಲ್ಯದ ಅಕ್ರಮ ಆಸ್ತಿ ವಶ

ದರೋಡೆಕೋರ, ರಾಜಕಾರಣಿ ಮತ್ತು ಸಮಾಜವಾದಿ ಪಕ್ಷದ ಮಾಜಿ ನಾಯಕ ಅತೀಕ್ ಅಹ್ಮದ್ ಎಂಬಾತ ಈ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ಆರೋಪಿಸಿದ್ದರು. ಅತೀಕ್ ಅಹ್ಮದ್ ತನ್ನ ಪ್ರತಿಸ್ಪರ್ಧಿಯಾಗಿದ್ದ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಶಾಸಕ ರಾಜು ಪಾಲ್ ಅವರ ಹತ್ಯೆಗೈದಿದ್ದರು. ಉಮೇಶ್ ಪಾಲ್ ಈ ಕೊಲೆ ಪ್ರಕರಣದ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಅಹಮದಾಬಾದ್‌ನ ಜೈಲಿನಲ್ಲಿರುವ ಅತೀಕ್ ಅಹ್ಮದ್ ಪೊಲೀಸರ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸುವ ಮೊದಲು ಸಾಕ್ಷಿದಾರನನ್ನು ಕೊಲ್ಲಲು ಸಹಚರರಿಗೆ ಸುಪಾರಿ ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಎಫ್‌ಐಆರ್‌ನಲ್ಲಿ ಅತೀಕ್ ಅಹ್ಮದ್, ಆತನ ಪುತ್ರ ಅಸದ್ ಅಹ್ಮದ್, ಪತ್ನಿ ಮತ್ತು ಬಿಎಸ್ಪಿ ನಾಯಕಿ ಶೈಸ್ತಾ ಪರ್ವೀನ್ ಹೆಸರನ್ನು ಉಲ್ಲೇಖಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಶೂಟೌಟ್‌ನಿಂದ ನಾಪತ್ತೆಯಾಗಿರುವ ಅತೀಕ್ ಅಹ್ಮದ್‌ನ ಇನ್ನೊಬ್ಬ ಆಪ್ತ ಸಹಾಯಕ ಜಾಫರ್ ಅಹ್ಮದ್ ಮನೆಯಲ್ಲಿ ಪೊಲೀಸರು ನೆಲಸಮಗೊಳಿಸಿದ್ದಾರೆ. ಇದಕ್ಕೂ ಮೊದಲು ಬಂಗಲೆಯಲ್ಲಿ ತಪಾಸಣೆ ನಡೆಸಿದಾಗ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಪತ್ತೆಯಾಗಿವೆ. ಇದನ್ನೂ ಓದಿ: ದಿನಕ್ಕೆ 5 ಬಾರಿ ನಮಾಜ್, 2 ಸಸಿ ನೆಡಬೇಕು – ಅಪರಾಧಿಗೆ ವಿಭಿನ್ನ ಶಿಕ್ಷೆ ನೀಡಿದ ಕೋರ್ಟ್

ಯೋಗಿ ಆದಿತ್ಯನಾಥ್ (Yogi Adityanath) ಅವರ “ಬುಲ್ಡೋಜರ್ ನೀತಿ” ಉತ್ತರ ಪ್ರದೇಶ ರಾಜ್ಯದಲ್ಲಿ ಚಾಲ್ತಿಯಲ್ಲಿದೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವವರ ಮನೆಗಳನ್ನು ನೆಲಸಮ ಮಾಡಲಾಗುತ್ತದೆ. ಪೊಲೀಸರು ಈ ಕಾರ್ಯಾಚರಣೆಯ ಜವಾಬ್ದಾರಿ ಹೊತ್ತಿರುತ್ತಾರೆ.

Comments

Leave a Reply

Your email address will not be published. Required fields are marked *