18 ತಿಂಗಳ ಕಿಲಾರಿ ಹೋರಿ ಬರೋಬ್ಬರಿ 3 ಲಕ್ಷ 25 ಸಾವಿರಕ್ಕೆ ಮಾರಾಟ

ಬಾಗಲಕೋಟೆ: ಬರೋಬ್ಬರಿ ಮೂರು ಲಕ್ಷದ 25 ಸಾವಿರ ರೂಪಾಯಿಗೆ 18 ತಿಂಗಳ ಕಿಲಾರಿ ಹೋರಿಯೊಂದು ಮಾರಾಟವಾಗುವ ಮೂಲಕ ಎಲ್ಲರಲ್ಲೂ ಎಚ್ಚರಿ ಮೂಡಿಸಿದೆ.

ಈ ಹೋರಿ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದ ನಾಲ್ಕನೇ ಕಿನಾಲ್ ತೋಟದ ವಸತಿ ಪ್ರದೇಶದ ಭೀಮಪ್ಪ ಬರಡಗಿ ಎಂಬವರಿಗೆ ಸೇರಿದೆ. ಸದ್ಯ ಇದನ್ನು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ಮೂಲದ ಅಶೋಕ್ ಕುರಿ ಎಂಬವರು 3 ಲಕ್ಷದ 25 ಸಾವಿರಕ್ಕೆ ಖರೀದಿ ಮಾಡಿದ್ದಾರೆ. ಇದನ್ನೂ ಓದಿ: ನೆಚ್ಚಿನ ನಟನನ್ನು ಮಾತಾಡಿಸುತ್ತಾ ವೀಡಿಯೋ ಕಾಲ್‍ನಲ್ಲೇ ಗಳಗಳನೇ ಅತ್ತ ವೃದ್ಧೆ!

ಕಿಲಾರಿ ಹೋರಿಯು ಆರು ಅಡಿ ಎತ್ತರವಿದ್ದು, ಪೊಗರ್ದಸ್ತಾಗಿದೆ. ನೋಡೋದಕ್ಕೆ ಭಾರೀ ಮೈಮಾಟವಿರುವ ಹೋರಿಗೆ ಲಕ್ಷ ಲಕ್ಷ ಬೆಲೆ ಕಟ್ಟಲಾಗಿದೆ. ಜಾನುವಾರು ಪ್ರದರ್ಶನದಲ್ಲಿ ಭಾಗಿಯಾಗಿ ಗಮನ ಸೆಳೆಯುತ್ತಿದ್ದ ಹೋರಿಯನ್ನು ಭೀಮಪ್ಪ ಬರಡಗಿ ಆರು ತಿಂಗಳಿದ್ದಾಗ ಒಂದು ಲಕ್ಷಕ್ಕೆ ಖರೀದಿ ಮಾಡಿದ್ದರು.

ಸದ್ಯ ಮೂರು ಲಕ್ಷ 25 ಸಾವಿರಕ್ಕೆ ಮಾರಾಟವಾಗುವ ಮೂಲಕ ಈ ಕಿಲಾರಿ ಹೋರಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಇದನ್ನೂ ಓದಿ:  ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಟ್ರಸ್ಟ್‌ಗೆ ಸುಪ್ರೀಂಕೋರ್ಟ್‍ನಲ್ಲಿ ಹಿನ್ನಡೆ

Comments

Leave a Reply

Your email address will not be published. Required fields are marked *