`ಬಡ್ಡೀಸ್’ ಪ್ರಚಾರದ ವೇಳೆ ಅಪಘಾತ: ಕಿರಣ್ ರಾಜ್ ಜಸ್ಟ್ ಮಿಸ್

ಸ್ಯಾಂಡಲ್‌ವುಡ್ ನಿರೀಕ್ಷಿತ ಸಿನಿಮಾ `ಬಡ್ಡೀಸ್’ ರಿಲೀಸ್‌ಗೆ ರೆಡಿಯಿದೆ. ಈ ಬೆನ್ನಲ್ಲೇ `ಬಡ್ಡೀಸ್’ ಚಿತ್ರ ಪ್ರಚಾರದ ವೇಳೆ ರ್ಧುಘಟನೆಯೊಂದು ಸಂಭವಿಸಿದೆ. ʻಬಡ್ಡೀಸ್’ ಸಿನಿಮಾ ಪ್ರಚಾರದ ವಾಹನ ಜಖಂಯಾಗಿದೆ. ಅಪಾಯದಿಂದ ಕಿರಣ್ ರಾಜ್ ಮತ್ತು ತಂಡ ಸೇಫ್ ಆಗಿದ್ದಾರೆ.

ಕಿರುತೆರೆಯ `ಕನ್ನಡತಿ’ ಸೀರಿಯಲ್ ಮೂಲಕ ಮನೆ ಮಾತಾಗಿರುವ ನಟ ಕಿರಣ್ ರಾಜ್ ಅವರು ಜೂನ್‌ 24ಕ್ಕೆ ರಿಲೀಸ್‌ ಆಗಲಿರುವ ‘ಬಡ್ಡೀಸ್’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಬೆಳಗಾವಿಯ ಕಾಲೇಜ್‌ವೊಂದರಲ್ಲಿ ಭೇಟಿ ನೀಡುವ ವೇಳೆ ಪ್ರಚಾರಕ್ಕಾಗಿ ರೆಡಿ ಮಾಡಿದ್ದ ವಾಹನದ ಮೇಲೆ ವಿದ್ಯುತ್ ಕಂಬ ಬಿದ್ದು, ವಾಹನ ಜಖಂ ಆಗಿದೆ. ಸಿನಿಮಾ ಪ್ರಚಾರಕ್ಕೆ ಹೋಗುವಾಗ ಸಿನಿಮಾದ ಪ್ರಚಾರ ವಾಹನ ಜಖಂ `ಬಡ್ಡೀಸ್’ ಸಿನಿಮಾ ತಂಡದ ಯಾರಿಗೂ ಏನೂ ಆಗಿಲ್ಲ ಎಂದು ಕಿರಣ್ ರಾಜ್ ಸ್ಪಷ್ಟನೆ ನೀಡಿದ್ದಾರೆ.

 

View this post on Instagram

 

A post shared by Kiran Raj (@itskiranraj)

ಕಿರಣ್ ರಾಜ್ ಅವರು ಪ್ರಚಾರಕ್ಕೆಂದೇ ಸಿದ್ಧಗೊಳಿಸಿರುವ ವಾಹನದಲ್ಲಿ ಸುಮಾರು ಕಾಲ ಟ್ರಾವೆಲ್ ಮಾಡಿದ್ದರು. ಬೆಳಗಾವಿಯಲ್ಲಿ ಒಂದು ಕಾಲೇಜ್‌ಗೆ ಭೇಟಿ ನೀಡಿದ ನಂತರ ಇನ್ನೊಂದು ಕಾಲೇಜಿಗೆ ಭೇಟಿ ಕೊಡಬೇಕಿತ್ತು. ಹೀಗಾಗಿ ಆ ಪ್ರಚಾರದ ವಾಹನ ಮೊದಲಿಗೆ ಹೋಯಿತು. ಆಗ ಕಿರಣ್ ರಾಜ್ ಅವರು ಪ್ರಚಾರದ ವಾಹನದಿಂದ ಇಳಿದು, ಅವರ ಕಾರ್‌ನಲ್ಲಿ ಬರುತ್ತಿದ್ದರು. ಇದನ್ನೂ ಓದಿ:ಬಾಮೈದನಿಂದಲೇ ಸ್ಯಾಂಡಲ್‌ವುಡ್ ನಟ ಸತೀಶ್ ಬರ್ಬರ ಹತ್ಯೆ?

ಬಳಿಕ ಪ್ರಚಾರದ ವಾಹನದವರು ಟೀ ಕುಡಿಯುವ ಸಲುವಾಗಿ ವಾಹನವನ್ನು ನಿಲ್ಲಿಸಿ ಅದರಿಂದ ಇಳಿದಿದ್ದಾರೆ. ಆ ವೇಳೆ ಆ ವಾಹನದ ಮೇಲೆ ಕಂಬ ಬಿದ್ದಿದೆ. ವಾಹನದ ಮುಂಭಾಗ ಫುಲ್ ಜಖಂ ಆಗಿದೆ. ಕಂಬ ಬೀಳುವ ವೇಳೆ ವಾಹನದ ಒಳಗಡೆ ಯಾರೂ ಇರಲಿಲ್ಲ. ಹೀಗಾಗಿ ಯಾವ ಅಪಾಯವೂ ಆಗಿಲ್ಲ. ಆ ವಾಹನಕ್ಕೆ ಅಪಾಯ ಆಗುವ ಅರ್ಧ ಗಂಟೆ ಮುಂಚೆ ನಾನು ಅದರಿಂದ ಇಳಿದಿದ್ದೆ. ಯಾರಿಗೂ ಯಾವ ಹಾನಿಯೂ ಆಗಿಲ್ಲ ಇದೀಗ ಚಿತ್ರತಂಡ ಬೆಂಗಳೂರಿಗೆ ಹಿಂದಿರುಗಿದ್ದಾರೆ ಎಂದು ನಟ ಕಿರಣ್ ರಾಜ್ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಸ್ಪಷ್ಟನೆ ನೀಡಿದ್ದಾರೆ.

Live Tv

Comments

Leave a Reply

Your email address will not be published. Required fields are marked *