ಕಾಂಗ್ರೆಸ್ ಉಸಿರು ನಿಲ್ಲಿಸುತ್ತೇನೆ ಎಂದಿದ್ದ ಬಿಎಸ್‍ವೈಗೆ ಉತ್ತರ ಸಿಕ್ಕಿದೆ: ಚಲುವರಾಯಸ್ವಾಮಿ

ಮಂಡ್ಯ: ಕಾಂಗ್ರೆಸ್ ಉಸಿರು ನಿಲ್ಲಿಸುತ್ತೇನೆ ಎಂದಿದ್ದ ಬಿಎಸ್‍ವೈಗೆ ಈ ಚುನಾವಣೆ ಉತ್ತರ ನೀಡಿದೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷ ಮಂಡ್ಯ ಕಾಂಗ್ರೆಸ್‍ಗೆ ಕರಾಳವಾಗಿತ್ತು. ಪಂಚಾಯಿತಿಯಲ್ಲೂ ಸಹ ಜೆಡಿಎಸ್‍ಗಿಂತಲೂ ನಾವು ಕಡಿಮೆ ಇದ್ದೆವು. ಎಂಎಲ್‍ಸಿ ಚುನಾವಣೆಯಲ್ಲಿ ಪಕ್ಷಾತೀತವಾಗಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ದಿನೇಶ್ ಗೂಳಿಗೌಡರ ಗೆಲುವು ನಮ್ಮ ಒಗ್ಗಟ್ಟಿನ ಫಲಿತಾಂಶ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಪತ್ನಿಯ ಸಾವಿನ ಸುದ್ದಿ ತಿಳಿದು ನೇಣಿಗೆ ಶರಣಾದ ಪತಿ

ನಮಗೆ ಯಾವುದೇ ಅಧಿಕಾರ ಇಲ್ಲದ ಸಮಯದಲ್ಲಿ ಮತದಾರರು ನಮ್ಮ ಕೈಹಿಡಿದಿದ್ದಾರೆ. ಇದು ಮಂಡ್ಯ ಜಿಲ್ಲೆಯ ಸ್ವಾಭಿಮಾನದ ಗೆಲುವಾಗಿದೆ. ಈ ಗೆಲುವು ಪ್ರಥಮ ಹೆಜ್ಜೆ, ಇದನ್ನು ಜವಬ್ದಾರಿಯನ್ನಾಗಿ ತೆಗೆದುಕೊಂಡಿದ್ದೇವೆ. ಬಿಜೆಪಿ, ಜೆಡಿಎಸ್ ರೈತ ಸಂಘದ ಸದಸ್ಯರು ನಮ್ಮನ್ನ ಬೆಂಬಲಿಸಿದ್ದಾರೆ ಅವರಿಗೆಲ್ಲ ಕೃತಜ್ಞತೆ ಎಂದು ನುಡಿದರು. ಇದನ್ನೂ ಓದಿ: ಅಭ್ಯರ್ಥಿ ರವಿ ಮದ್ದು ಗುಂಡೇಟು ತಿಂದವ್ರೆ: ಡಿಕೆಶಿ

ಎಲ್ಲರೂ ಒಟ್ಟಾಗಿ ಜೆಡಿಎಸ್ ಸೋಲಿಸಿದ್ದು ತಪ್ಪಾ? ರಾಜ್ಯದಲ್ಲಿ ಬಿಜೆಪಿಗೆ ಸಹಕರಿಸುತ್ತೇವೆ ಎಂದು ಜೆಡಿಎಸ್ ನಾಯಕರು ಹೇಳಿದ್ದರು. ನಾವು ಎಲ್ಲೂ ಯಾರನ್ನು ಬೆಂಬಲ ಕೇಳಿರಲಿಲ್ಲ. ಬಿಜೆಪಿಯಲ್ಲೂ ಕೆಲವರು ನಮ್ಮ ಅಣ್ಣ ತಮ್ಮಂದಿರು ನಮಗೆ ಸಹಕರಿಸಿದ್ದಾರೆ ಅವರಿಗೆ ಧನ್ಯವಾದ ಎಂದರು.

Comments

Leave a Reply

Your email address will not be published. Required fields are marked *