ಯಾರ್ ಅಡ್ಡ ಬಂದ್ರೂ ಬಿಎಸ್‍ವೈ ಸಿಂಹಾಸನ ತಪ್ಪಿಸಲು ಆಗಲ್ಲ: ನಟ ಜಗ್ಗೇಶ್

ತುಮಕೂರು: ಯಾರು ಅಡ್ಡಬಂದರೂ ಯಡಿಯೂರಪ್ಪರ ಮುಖ್ಯಮಂತ್ರಿ ಸಿಂಹಾಸನ ತಪ್ಪಿಸಲು ಆಗಲ್ಲ ಅಂತ ನವರಸನಾಯಕ ಜಗ್ಗೇಶ್ ಹೇಳಿದ್ದಾರೆ.

ತುಮಕೂರು ಜಿಲ್ಲೆ ತುರುವೇಕೆರೆ ಯಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ನಟ, ಯಡಿಯೂರಪ್ಪ ಅವರ ಮುಖ್ಯಮಂತ್ರಿ ಸಿಂಹಾಸನ ಯಾರಿಂದಲೂ ತಪ್ಪಿಸಲು ಆಗಲ್ಲ. ಮೋದಿ ಬಗ್ಗೆ ಇಡೀ ವಿಶ್ವವೇ ಮಾತನಾಡುತ್ತೆ. ಸುಲಭ ವ್ಯವಹಾರದಲ್ಲಿ 130ನೇ ಸ್ಥಾನದಲ್ಲಿರುವ ಭಾರತ 100ನೇ ಸ್ಥಾನಕ್ಕೆ ಜಿಗಿದಿದೆ. ಇನ್ನು ಮುಂದಿನ ದಿನದಲ್ಲಿ 50 ಸ್ಥಾನಕ್ಕೇರಲಿದೆ ಅಂತ ಹೇಳಿದ್ರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಏನೋ ಮಾಡ್ತಾರೆ ಎಂದು ಅಧಿಕಾರ ಕೊಟ್ರು. ಆದ್ರೆ ಇದೀಗ ಆಡೋ ಮಕ್ಕಳು ಕೂಡ ಹೇಳ್ತಾರೆ ಅತ್ಯಂತ ಭ್ರಷ್ಟ ಸರ್ಕಾರವೆಂದು. ಯಡಿಯೂರಪ್ಪ ಅವರು ನೀಡಿದ ಅನುದಾನದಿಂದ ಇಂದು ತುರುವೇಕೆರೆ ಕ್ಷೇತ್ರ ಅಭಿವೃದ್ಧಿ ಆಗಿದೆ. ತುರುವೇಕೆರೆ ಕ್ಷೇತ್ರದ ಹಾಲಿ ಜೆಡಿಎಸ್ ಶಾಸಕ ಕೃಷ್ಣಪ್ಪರ ಟಪ್ಪಾಂಗುಚ್ಚಿ ನೋಡೋಕೆ ಚಂದ. ಅವರು ಹುಡುಗೀರ ಜೊತೆ ಕುಣಿತಾನೇ ಇರಲಿ. ಜನರು ಒಕ್ಕಲಿಗರಾದ ಮಸಾಲೆ ಜಯರಾಮ್ ನ್ನು ಗೆಲ್ಲಿಸಬೇಕು ಅಂದ್ರು.

ಜೆಡಿಎಸ್ ಗೆ ಮತಹಾಕಿ ಎಂದು ದೇವೇಗೌಡರು ಕೇಳಿಕೊಂಡರೂ ಹಾಕಬೇಡಿ ಅಂತ ಎಚ್‍ಡಿಡಿ ಬಗ್ಗೆ ಜಗ್ಗೇಶ್ ಮಿಮಿಕ್ರಿ ಮಾಡಿದ್ರು.

 

Comments

Leave a Reply

Your email address will not be published. Required fields are marked *