ಲೋಕಸಭೆ ಟಿಕೆಟ್ ನೀಡಲು 5 ಕೋಟಿ ರೂ. ಕೇಳಿದ್ರು ಮಾಯಾವತಿ- ಮಾಜಿ ಎಂಎಲ್‍ಸಿ ಆರೋಪ

ಲಕ್ನೋ: ಅಲಿಗಢ್ ಕ್ಷೇತ್ರದಿಂದ ನನಗೆ ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡಲು ಬಹುಜನ್ ಸಮಾಜ್ ಪಕ್ಷ (ಬಿಎಸ್‍ಪಿ) ಅಧ್ಯಕ್ಷೆ ಮಾಯಾವತಿ 5 ಕೋಟಿ ರೂ. ಕೇಳಿದ್ರು ಎಂದು ಮಾಜಿ ಎಂಎಲ್‍ಸಿ ಮುಕುಲ್ ಉಪಾಧ್ಯಾಯ ಆರೋಪಿಸಿದ್ದಾರೆ.

ಬಿಎಸ್‍ಪಿ ಇಂದ ಹೊರಬಂದ ನಂತರ ಮುಕುಲ್ ಉಪಾಧ್ಯಾಯ, ಮಾಯಾವತಿ ಅವರು ಲೋಕಸಭೆ ಚುನಾವಣೆ ಟಿಕೆಟ್ ನೀಡಲು ನನ್ನ ಬಳಿ ನಾಲ್ಕು ಬಾರಿ 5 ಕೋಟಿ ರೂ. ಕೇಳಿದ್ರು. ಇದಕ್ಕೆ ನಿರಾಕರಿಸಿದ್ದಕ್ಕೆ ಅಲಿಗಢ್ ಕ್ಷೇತ್ರದಿಂದ ಸ್ಪರ್ಧಿಸಲು ನನ್ನ ಸಹೋದರ ರಾಮ್‍ವೀರ್ ಉಪಧ್ಯಯನ ಪತ್ನಿ ಸೀಮಾರಿಗೆ ಟಿಕೆಟ್ ನೀಡಿದ್ದಾರೆ. ರಾಜಕಾರಣಕ್ಕಾಗಿ ಸಹೋದರನೇ ನನ್ನ ವಿರುದ್ಧ ನಿಂತಿದ್ದಾನೆ ಎಂದು ಬಿಎಸ್‍ಪಿ ನಾಯಕರ ವಿರುದ್ಧ ಮುಕುಲ್ ಉಪಾಧ್ಯಾಯ ಕಿಡಿಕಾರಿದ್ದಾರೆ.

ಅಷ್ಟೇ ಅಲ್ಲದೆ ಬಿಎಸ್‍ಪಿಯ ಸಂಯೋಜಕರು ಕೆಲವು ದಿನಗಳ ಹಿಂದೆಯಷ್ಟೆ ತನ್ನ ಬಳಿ ಅಲಿಗಢ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದ ನಿಧಿಗೆಂದು 5 ಕೋಟಿ ರೂ. ಬೇಡಿಕೆ ಇಟ್ಟಿದ್ದರು ಎಂದು ಹೇಳಿದ್ದಾರೆ.

ಮುಕುಲ್ ಅವರ ಈ ಆರೋಪವನ್ನು ಬಿಎಸ್‍ಪಿ ತಳ್ಳಿಹಾಕಿದೆ. ಬಿಜೆಪಿಯನ್ನು ಮೆಚ್ಚಿಸಲು ಮುಕುಲ್ ಪ್ರಯತ್ನಿಸುತ್ತಿದ್ದರು ಅದಕ್ಕಾಗಿ ಪಕ್ಷದಿಂದ ಉಚ್ಛಾಟಿಸಿದ್ದೇವೆ. ಮುಕುಲ್ ಪಕ್ಷದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕೆಲಸವಿಲ್ಲದೆ ಅರ್ಥವಿಲ್ಲದ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ಆಗ್ರಾ- ಅಲಿಗಢ್ ವಿಭಾಗದ ಬಿಎಸ್‍ಪಿ ಪಕ್ಷದ ವಲಯ ಸಂಯೋಜಕ ಮುಖ್ಯಸ್ಥರಾದ ಸುನೀಲ್ ಚಿತ್ತೋರ್ ಸ್ಪಷ್ಟಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *