ಪ್ರಧಾನಿ ಮೋದಿಗೆ ನನ್ನ ಕಂಡ್ರೆ ಭಯ ಎಂಬ ಸಿಎಂ ಹೇಳಿಕೆಗೆ ಬಿಎಸ್‍ವೈ ಪ್ರತಿಕ್ರಿಯಿಸಿದ್ದು ಹೀಗೆ

ತುಮಕೂರು: ಪ್ರಧಾನಿ ಅವರಿಗೆ ನನ್ನ ಕಂಡ್ರೆ ಭಯ ಅಂತಾ ಸಿಎಂ ಹೇಳಿಕೆ ನೀಡಿದ್ದಾರೆ. ಇದು ಮೂರ್ಖತನದ ಪರಮಾವಧಿ. ಸಾಮಾನ್ಯ ಮುಖ್ಯಮಂತ್ರಿ ಈ ರೀತಿ ಹೇಳೋದು ಶೋಭೆ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಸಿದ್ದಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸಿದ್ದರಾಮಯ್ಯ ಸೊಕ್ಕಿನಿಂದ ಮೆರೆದು ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ. ಪ್ರಧಾನಿಗೆ ನನ್ನ ಕಂಡ್ರೆ ಭಯ ಅಂತ ನೀಡಿರುವ ಹೇಳಿಕೆ ಸಿಎಂ ಅವರಿಗೆ ಶೋಭೆ ತರಲ್ಲ ಅಂದ್ರು.

ಧರ್ಮಸ್ಥಳಕ್ಕೆ ಹೋದಾಗ ಪ್ರಧಾನಿಗಳು ಭಯ ಭಕ್ತಿಯಿಂದ ಉಪವಾಸ ಇದ್ದರು. ಈ ಮನುಷ್ಯ ನಾನು ಮೀನು, ಕೋಳಿ ತಿಂದು ಹೋಗಿದ್ದೆ ಅಂತಾ ಭಕ್ತರಿಗೆ ಅಪಮಾನ ಮಾಡಿದ್ದಾರೆ. ದರ್ಶನಕ್ಕೂ ದೇವಸ್ಥಾನದ ಒಳಗೆ ಹೋಗದೇ ಇದ್ದಿದ್ದು, ನಾಡಿನ ಜನ ಈ ರೀತಿಯ ಮುಖ್ಯಮಂತ್ರಿಯನ್ನು ಪಡೆದಿದ್ದಾರಲ್ವ ಎಂದು ನೋವಾಗುತ್ತಿದೆ ಅಂತ ಬಿಎಸ್‍ವೈ ಹೇಳಿದ್ದಾರೆ.

ಪರಿರ್ವತನಾ ರ್ಯಾಲಿಯಲ್ಲಿ ಶಾಸಕ ಸಿ.ಪಿ.ಯೋಗಿಶ್ವರ್ ಹಾಗೂ ಕುಡಚಿ ಶಾಸಕ ಬಿ.ಜೆ.ಪಿ ಸೇರಲಿದ್ದಾರೆ. ಸಿಎಂ ಅವರದ್ದು ಎಲುಬಿಲ್ಲದ ನಾಲಗೆ. ಅವರು ಯಾರು ನನ್ನ ಜೈಲಿಗೆ ಕಳುಹಿಸೋಕೆ? ಪದೇ ಪದೇ ನನ್ನ ಜೈಲಿಗೆ ಕಳುಹಿಸ್ತೀನಿ ಅನ್ನೋ ಹೇಳಿಕೆಗೆ ಕಡಿವಾಣ ಹಾಕುತ್ತೇನೆ. ಸುಳ್ಳು ಹೇಳಿಕೆಗೆ ಮಾನನಷ್ಟ ಮೊಕ್ಕದ್ದಮೆ ಹಾಕುತ್ತೇನೆ. ಜಾರ್ಜ್ ರಾಜೀನಾಮೆ ಕೊಡದೇ ಇದ್ರೆ ಅವರು ಉದ್ಧಾರ ಆಗಲ್ಲ. ಅದು ಅನಿವಾರ್ಯ ಕೂಡ ಅಂತ ಬಿಎಸ್‍ವೈ ಹೇಳಿದ್ರು.

https://www.youtube.com/watch?v=J7BS4S3mGUc

https://www.youtube.com/watch?v=2Hiza40jJxc

Comments

Leave a Reply

Your email address will not be published. Required fields are marked *