ಕಾರಿನಲ್ಲಿ RCB ಪಂದ್ಯ ವೀಕ್ಷಿಸಿದ ಮಾಜಿ ಸಿಎಂ ಬಿಎಸ್‍ವೈ

ಶಿವಮೊಗ್ಗ: ಜಿಲ್ಲಾ ಪ್ರವಾಸದಲ್ಲಿ ಇರುವ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಶುಕ್ರವಾರ ರಾತ್ರಿ ನಡೆದ RCB ಪಂದ್ಯವನ್ನು ತಮ್ಮ ಕಾರಿನಲ್ಲಿ ಕುಳಿತು ಕುತೂಹಲದಿಂದ ಪಂದ್ಯ ವೀಕ್ಷಣೆ ಮಾಡಿದ್ದಾರೆ.

ಶುಕ್ರವಾರ ರಾತ್ರಿ ಶಿವಮೊಗ್ಗದಿಂದ – ಶಿಕಾರಿಪುರಕ್ಕೆ ತೆರಳುವ ವೇಳೆ ಯಡಿಯೂರಪ್ಪ ಅವರು RCB ಹಾಗೂ ಡೆಲ್ಲಿ ನಡುವೆ ನಡೆದ ಪಂದ್ಯವನ್ನು ವೀಕ್ಷಿಸಿದರು. ಐಪಿಎಲ್ ತಂಡಗಳಲ್ಲಿ RCB ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವಾಗಿದ್ದು, ಯಡಿಯೂರಪ್ಪ ಅವರು ಸಹ ಕ್ರೀಡಾ ಅಭಿಮಾನಿಗಳಾಗಿದ್ದಾರೆ. ಅದಕ್ಕೆ RCB ಪಂದ್ಯವನ್ನು ನಿನ್ನೆ ಸಂತಸದಿಂದ ವೀಕ್ಷಿಸುತ್ತಿದ್ದರು. ಇದನ್ನೂ ಓದಿ:  ಜ್ಯೋತಿರಾದಿತ್ಯ ಸಿಂಧಿಯಾರನ್ನು ಭೇಟಿಯಾದ ಸಿಎಂ ಬೊಮ್ಮಾಯಿ

ಯಡಿಯೂರಪ್ಪ ಅವರು ಉಪಚುನಾವಣೆಯ ಸಲುವಾಗಿ ಪ್ರವಾಸ ಕೈಗೊಂಡಿದ್ದು, ಪ್ರಸ್ತುತ ಶಿವಮೊಗ್ಗದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಈ ಬಾರಿಯೂ ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ಸಹ ಬಿಎಸ್‍ವೈ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಯಡಿಯೂರಪ್ಪ ಅವರ ಆಪ್ತರ ಮೇಲೆ ಐಟಿ ದಾಳಿ ನಡೆಯುತ್ತಿದೆ. ಈ ಹಿನ್ನೆಲೆ ಪ್ರತಿಪಕ್ಷದ ನಾಯಕರು, ಈ ದಾಳಿಯನ್ನು ಬೇಕೆಂದು ಬಿಎಸ್‍ವೈ ಆಪ್ತರನ್ನೆ ಟಾರ್ಗೆಂಟ್ ಮಾಡಲಾಗುತ್ತಿದೆ ಎಂದು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ, ವಿಜಯೇಂದ್ರ ಆಪ್ತರೇ ಟಾರ್ಗೆಟ್- ಐಟಿ ದಾಳಿ ಬಗ್ಗೆ ಸಿದ್ದರಾಮಯ್ಯ ಅನುಮಾನ

Comments

Leave a Reply

Your email address will not be published. Required fields are marked *