ಆಂತರಿಕ ಸಮನ್ವಯ ಸಮಿತಿ ರಚನೆಗೆ `ಐ ಡೋಂಟ್ ಕೇರ್’ ಎಂದ ಬಿಎಸ್‍ವೈ

ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಸರ್ಕಾರದಲ್ಲಿ ಸಮನ್ವಯತೆ ಕಚ್ಚಾಟ ನೋಡಿದ್ವಿ. ಈಗ ಬಿಜೆಪಿಯಲ್ಲೂ ಶುರುವಾಗಿದೆಯಾ ಸಮನ್ವಯದ ಕಾದಾಟ ಅನ್ನೋ ಪ್ರಶ್ನೆ ಎದ್ದಿದೆ. ಕಟೀಲ್ ಟೀಂ ಪ್ರಸ್ತಾಪಕ್ಕೆ ಯಡಿಯೂರಪ್ಪ ಟೀಂ ಗರಂ ಆಗಿದೆ ಅನ್ನೋ ಸುದ್ದಿ ಹರಿದಾಡ್ತಿದೆ. `ಐ ಡೋಂಟ್ ಕೇರ್’ ಅಂತಾ ಯಡಿಯೂರಪ್ಪ ಸಿಟ್ಟಾಗಿದ್ದಾರಂತೆ.

ಪೀಸ್ ಪ್ರೆಸಿಡೆಂಟ್ ಇದ್ದವರನ್ನ ವಾರ್ ಪ್ರೆಸಿಡೆಂಟ್ ಮಾಡಿದೆ ಬಿಜೆಪಿ ಹೈಕಮಾಂಡ್. ತಾತ್ಕಾಲಿಕ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ನಳೀನ್ ಕುಮಾರ್ ಕಟೀಲ್ ಈಗ ಫುಲ್‍ಟೈಮ್ ಅಧ್ಯಕ್ಷ. ಪೀಸ್ ಟೈಂ ಪ್ರೆಸಿಡೆಂಟ್ ಅಧ್ಯಕ್ಷ ಮಾತ್ರ ಎನ್ನುತ್ತಿದ್ದವರಿಗೆ ವಾರ್ ಟೈಂ ಪ್ರೆಸಿಡೆಂಟ್ ಶಾಕ್ ಕೊಟ್ಟಿದ್ದಾರೆ. ಮೂರು ವರ್ಷಗಳ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಸಂಘಟನೆ ನಡೆಯಲಿದೆ. ಈ ಬೆನ್ನಲ್ಲೇ ನಳೀನ್ ಕುಮಾರ್ ಟೀಂನಿಂದ ಆಂತರಿಕ ಸಮನ್ವಯ ಸಮಿತಿಯ ಪ್ರಸ್ತಾಪವಾಗಿದೆ ಎನ್ನಲಾಗಿದೆ. ಸರ್ಕಾರ ಮತ್ತು ಪಕ್ಷದ ನಡುವೆ ಆಂತರಿಕ ಸಮನ್ವಯ ಸಮಿತಿ ರಚನೆಗೆ ಪಟ್ಟು ಹಿಡಿಯಲಾಗಿದೆ ಅಂತೆ.

ಆದರೆ ನಳಿನ್ ಕುಮಾರ್ ಟೀಂ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಫುಲ್ ಗರಂ ಆಗಿ ರಿಯಾಕ್ಟ್ ಮಾಡಿದ್ದಾರೆ ಅನ್ನೋದು ಬಿಜೆಪಿ ಪಡಸಾಲೆಯಲ್ಲಿ ಸದ್ದು ಮಾಡ್ತಿದೆ. ಪಕ್ಷ ಸಂಘಟನೆ ಕೆಲಸ ನೀವು ಮಾಡಿ, ಸರ್ಕಾರದ ಕೆಲಸ ನಾವು ಮಾಡ್ತೀವಿ ಯಾವುದೇ ಆಂತರಿಕ ಸಮನ್ವಯ ಸಮಿತಿ ರಚನೆ ಅಗತ್ಯತೆ ಇಲ್ಲ ಎಂಬ ಸಂದೇಶವನ್ನ ಯಡಿಯೂರಪ್ಪ ರವಾನಿಸಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಹೈಕಮಾಂಡ್ ಮಟ್ಟದಲ್ಲಿ ಯಡಿಯೂರಪ್ಪ ಸಂದೇಶಕ್ಕೆ ಒಪ್ಪಿಗೆ ಸಿಗುತ್ತಾ? ಯಡಿಯೂರಪ್ಪ ಜತೆ ಕಾದಾಟಕ್ಕೆ ಇಳಿಯದೇ ಸುಮ್ಮನಿರುತ್ತಾ ಕಟೀಲ್ ಟೀಂ ಎಂಬ ಕುತೂಹಲ ಮನೆ ಮಾಡಿದೆ.

Comments

Leave a Reply

Your email address will not be published. Required fields are marked *