ಬಿಎಸ್‍ವೈಗೆ ಪಾಪ ವಯಸ್ಸಾಗಿದೆ, ಕನಸು ಕಾಣುತ್ತಿದ್ದಾರೆ: ಎಂ ಬಿ ಪಾಟೀಲ್ ಟಾಂಗ್

ವಿಜಯಪುರ: ಪಾಪ ವಯಸ್ಸಾಗಿದೆ, ಕನಸು ಕಾಣುತ್ತಿದ್ದಾರೆ ಎಂದು ಮಾಜಿ ಸಿಎಂ ಯಡ್ಡಿಯೂರಪ್ಪರಿಗೆ ಮಾಜಿ ಸಚಿವ ಎಂ ಬಿ ಪಾಟೀಲ್ ಟಾಂಗ್ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಎಂಎಲ್‍ಸಿ ಚುನಾವಣೆಯ ಪ್ರಚಾರ ಸಭೆಯಲ್ಲಿ ಮತದಾರರಿಗೆ ಹಣ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಸುನಿಲಗೌಡ ಮತ್ತು ಕಾಂಗ್ರೆಸ್ ಚುನಾವಣೆಯಲ್ಲಿ ಹಣ ಹಂಚತ್ತಾರೆ ಅಂತಾರೆ. ಆದರೆ ಹಣ ಹಂಚುವ ಕೆಲಸ ಮಾಡುವವರೇ ಇವರು, ಹಣ ಹಂಚಿದವರ ಮೇಲೆ ದೂರು ದಾಖಲಿಸುತ್ತೇವೆ. ಸಚಿವ ಸ್ಥಾನದ ವಿಸ್ತರಣೆ ಬಗ್ಗೆ ನನಗೆ ಮಾಹಿತಿ ಇಲ್ಲ, ನಾನು ಎಂಎಲ್‍ಸಿ ಚುನಾವಣೆಯಲ್ಲಿದ್ದೇನೆ ಎಂದು ಯಡಿಯೂರಪ್ಪ ವಿರುದ್ಧ ಖಾರವಾಗಿ ಮಾತನಾಡಿದರು.

ಬಹಳ ದಿನಗಳ ನಂತರ ಸಮನ್ವಯ ಸಮಿತಿಯಲ್ಲಿ ಒಗ್ಗಟಾಗಿದ್ದಾರೆ ಎಂಬ ಯಡ್ಡಿಯೂರಪ್ಪ ಅವರ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಯಡ್ಡಿಯೂರಪ್ಪ ಈ ಹಿಂದೆ 20-20 ಮ್ಯಾಚ್ ಮಾಡಿದ್ದಾರೆ. ಅವಾಗ ಎಲ್ಲ ಸರಿಯಿತ್ತಾ? ಸಮ್ಮಿಶ್ರ ಸರ್ಕಾರ ಯಡ್ಡಿಯೂರಪ್ಪ ಮಾಡಿದಾಗ ಸರಿ ಇರುತ್ತದೆ. ಅದೇ ಕಾಂಗ್ರೆಸ್ ನವರು ಮಾಡಿದರೆ ಸಮಸ್ಯೆ ಆಗುತ್ತದೆ. ಅದೇ ಕಾಂಗ್ರೆಸ್ ಶಾಸಕರನ್ನ ಬಳಸಿಕೊಂಡು ಸಿಎಂ ಆಗೋಕೆ ಬಯಸುತ್ತಾರೆ, ಅದು ಸರಿನಾ? ಎಂದು ಪ್ರಶ್ನಿಸಿ ಆಪರೇಷನ್ ಕಮಲ ಮಾಡಿದರೆ ಸರಿ ಇರತ್ತದೆ ಎಲ್ಲ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *