ಇದು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾದ ಕ್ರೂರ ಕೃತ್ಯ – ಅಮೆರಿಕ ದಾಳಿ ಒಪ್ಪಿಕೊಂಡ ಇರಾನ್‌

– ಇನ್ನೂ ಹಲವು ಗುರಿಗಳು ಉಳಿದಿವೆ – ಮತ್ತೆ ದಾಳಿ ಸುಳಿವು ಕೊಟ್ಟ ಟ್ರಂಪ್‌
– ಶಾಂತಿ ಮಾತುಕತೆಗೆ ವಿಶ್ವಸಂಸ್ಥೆ ಮನವಿ

ವಾಷಿಂಗ್ಟನ್‌/ಟೆಹ್ರಾನ್‌: ಇರಾನ್‌ನ (Iran) ಫೋರ್ಡೊ, ನಟಾಂಜ್ ಮತ್ತು ಎಸ್ಪಹಾನ್‌ ಸೇರಿ ದೇಶದ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ನಡೆಸಿದ ಬಾಂಬ್‌ ದಾಳಿಯನ್ನು (Bomb Attack) ಇರಾನ್‌ನ ಪರಮಾಣು ಇಂಧನ ಸಂಸ್ಥೆ (AEOI) ದೃಢಪಡಿಸಿದೆ.

ನಮ್ಮ ಫೋರ್ಡೊ, ನಟಾಂಜ್ ಮತ್ತು ಎಸ್ಫಹಾನ್ ಪರಮಾಣು ಕೇಂದ್ರಗಳ (Nuclear Sites) ಮೇಲೆ ಶತ್ರುದೇಶ ದಾಳಿ ನಡೆಸಿದ್ದು, ಇದು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಯಾಗಿದೆ ಎಂದು ಹೇಳಿಕೊಂಡಿದೆ. ಅಲ್ಲದೇ ಈ ದಾಳಿಯನ್ನು ಬಲವಾಗಿ ಖಂಡಿಸುವಂತೆ ಇರಾನ್‌ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದೆ. ಜೊತೆಗೆ ತನ್ನ ಪರಮಾಣು ಅಭಿವೃದ್ಧಿ ಕಾರ್ಯಕ್ರಮ ನಿಲ್ಲಿಸಲು ಸಾಧ್ಯವಿಲ್ಲವೆಂದೂ ಹೇಳಿದೆ. ಇದನ್ನೂ ಓದಿ: ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್‌ ದಾಳಿ

ಶಾಂತಿ ಮಾತುಕತೆಗೆ ವಿಶ್ವಸಂಸ್ಥೆ ಮನವಿ
ಅಮೆರಿಕ ಭೀಕರ ಬಾಂಬ್‌ ದಾಳಿ ನಡೆಸಿದ ಬೆನ್ನಲ್ಲೇ ಶಾಂತಿ ಮಾತುಕತೆಗೆ ವಿಶ್ವಸಂಸ್ಥೆ (UN) ಮನವಿ ಮಾಡಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಇರಾನ್ ಮೇಲೆ ಅಮೆರಿಕ ತೆಗೆದುಕೊಂಡ ಮಿಲಿಟರಿ ಕ್ರಮದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಇದು ಅಪಾಯಕಾರಿ ಬೆಳವಣಿಗೆ, ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ನೇರ ಬೆದರಿಕೆಯೂ ಆಗಿದೆ. ಎಲ್ಲ ದೇಶಗಳು ಉದ್ವಿಗ್ನತೆಯನ್ನು ಕಡಿಮೆ ಮಾಡಬೇಕು. ಈ ಬಿಕ್ಕಟ್ಟಿಗೆ ಯಾವುದೇ ಪರಿಹಾರವಿಲ್ಲ. ಶಾಂತಿ ಮಾತುಕತೆಯ ಮೂಲಕ ಮಾತ್ರ ಬಗೆಹರಿಸಲು ಸಾಧ್ಯ ಎಂದು ಗುಟೆರಸ್‌ ಹೇಳಿದ್ದಾರೆ. ಇದನ್ನೂ ಓದಿ: 21 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್‌ ಬಲೂನ್‌ನಲ್ಲಿ ಬೆಂಕಿ ಅವಘಡ; 8 ಮಂದಿ ದುರ್ಮರಣ

northrop b 2 spirit stealth bomber 1

ಮತ್ತೆ ದಾಳಿಯ ಎಚ್ಚರಿಕೆ ನೀಡಿದ ಟ್ರಂಪ್‌
ಇನ್ನೂ ಫೋರ್ಡೊ, ನಟಾಂಜ್ ಮತ್ತು ಎಸ್ಫಹಾನ್ ಪರಮಾಣು ಕೇಂದ್ರಗಳ ಮೇಲಿನ ದಾಳಿಯನ್ನುದ್ದೇಶಿಸಿ ಶ್ವೇತಭವನದಲ್ಲಿ ಡೊನಾಲ್ಡ್‌ ಟ್ರಂಪ್‌ ಮಾತನಾಡಿದ್ದಾರೆ. ಇದನ್ನೂ ಓದಿ: ಬಂಕರ್‌ನಿಂದಲೇ ಸಂಭಾವ್ಯ ಉತ್ತರಾಧಿಕಾರಿಗಳ ಹೆಸರನ್ನು ಸೂಚಿಸಿದ ಖಮೇನಿ

ಇದು ಮುಂದುವರಿಯಲು ಸಾಧ್ಯವಿಲ್ಲ. ಕಳೆದ 8 ದಿನಗಳಲ್ಲಿ ನಡೆದ ದಾಳಿಗಿಂತ ಇದು ಭೀಕರವಾಗಿದೆ. ನಮ್ಮ ಇನ್ನೂ ಹಲವು ಗುರಿಗಳು ಉಳಿದಿವೆ. ಆದ್ರೆ ನೆನಪಿಟ್ಟುಕೊಳ್ಳಿ ಇನ್ನೂ ಹಲವು ಗುರಿಗಳು ಉಳಿದಿವೆ. ಇಸ್ರೇಲ್ ಜೊತೆಗಿನ ಸಂಘರ್ಷ ಕೊನೆಗೊಳಿಸದಿದ್ದರೆ, ಇಸ್ರೇಲ್‌ ಮೇಲೆ ನಿಖರ ದಾಳಿ ನಡೆಸಬೇಕಾಗುತ್ತದೆ ಎಂದು ಟ್ರಂಪ್‌ ನೇರ ಎಚ್ಚರಿಕೆ ನೀಡಿದ್ದಾರೆ.

ದಾಳಿ ಮಾಡುವುದು ನಮ್ಮ ಉದ್ದೇಶವಲ್ಲ. ಪರಮಾಣು ಪುಷ್ಟೀಕರಣ ಸಾಮರ್ಥ್ಯ ನಿಲ್ಲಿಸುವುದು ಹಾಗೂ ಭಯೋತ್ಪಾದನೆ ಬೆಂಬಲಿಸುವ ರಾಷ್ಟ್ರದಿಂದ ಪರಮಾಣು ಬೆದರಿಕೆಗಳನ್ನು ಕುಗ್ಗಿಸುವುದಷ್ಟೇ ಈ ದಾಳಿಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 1 ಸಾವಿರ ಕಿ.ಮೀ. ದೂರದಿಂದ ದಾಳಿ – ಕಾರಿನಲ್ಲಿ ಹೋಗುತ್ತಿದ್ದಾಗಲೇ ಇರಾನ್‌ ಟಾಪ್‌ ಸೇನಾ ನಾಯಕ ಹತ್ಯೆ

ಅಣ್ವಸ್ತ್ರ ಕೇಂದ್ರಗಳ ಮೇಲೆ ಬಾಂಬ್‌ ದಾಳಿ
ಇರಾನ್‌ನ ಫೋರ್ಡೊ, ನಟಾಂಜ್‌ ಮತ್ತು ಎಸ್ಪಹಾನ್ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಯಶಸ್ವಿ ಬಾಂಬ್‌ ದಾಳಿ ನಡೆಸಿರುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ. ಅಲ್ಲದೇ ನಮ್ಮ ಹಲವು ಗುರಿಗಳು ಇನ್ನೂ ಉಳಿದಿವೆ. ಶಾಂತಿ ಸಾಧಿಸದಿದ್ದರೆ ಮತ್ತೆ ದಾಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಎಲ್ಲ ವಿಮಾನಗಳು ಇರಾನ್ ವಾಯುಪ್ರದೇಶದಿಂದ ಸುರಕ್ಷಿತವಾಗಿ ಹೊರಗೆ ಬಂದಿವೆ. ಪ್ರಾಥಮಿಕ ಅಣು ಕೇಂದ್ರವಾದ ಫೋರ್ಡೊ ಮೇಲೆ ಪೂರ್ಣ ಪ್ರಮಾಣದ ಪೇಲೋಡ್ ಹೊಂದಿದ ಬಾಂಬ್ ದಾಳಿ ನಡೆಸಲಾಗಿದೆ. ಕಾರ್ಯವನ್ನು ಯಶಸ್ವಿಗೊಳಿಸಿದ ಅಮೆರಿಕದ ಮಹಾನ್ ಯೋಧರಿಗೆ ಅಭಿನಂದನೆಗಳು. ಜಗತ್ತಿನ ಬೇರೆ ಯಾವುದೇ ಸೈನ್ಯಕ್ಕೆ ಇಂತಹ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿ ಕೊನೆಗೆ ʻಇದು ಶಾಂತಿಯ ಸಮಯʼ ಎಂದಿದ್ದಾರೆ.