ತಂಗಿಯ ಕೈ-ಕಾಲು ಕಟ್ಟಿ ಬಲವಂತವಾಗಿ ರೇಪ್ ಮಾಡಿದ ಅಪ್ರಾಪ್ತ

– 15 ವರ್ಷದವನಿಂದ 14ರ ಬಾಲಕಿಯ ಮೇಲೆ ರೇಪ್
– ಬೆದರಿಕೆಯನ್ನೂ ಹಾಕ್ತಿದ್ದ ಕಾಮುಕ ಸಹೋದರ

ಚೆನ್ನೈ: ತನ್ನ ಒಡಹುಟ್ಟಿದ ತಂಗಿಯ ಮೇಲೆಯೇ 15 ವರ್ಷದ ಬಾಲಕ ಅತ್ಯಾಚಾರವೆಸಗಿದ ಹೀನಾಯ ಘಟನೆಯೊಂದು ನಡೆದಿರುವುದು ಚೆನ್ನೈನಲ್ಲಿ ಬೆಳಕಿಗೆ ಬಂದಿದೆ.

ಸಹೋದರ ತನ್ನ 14 ವರ್ಷದ ತಂಗಿಯ ಕೈ-ಕಾಲು ಕಟ್ಟಿ ಬಲವಂತವಾಗಿ ಅತ್ಯಾಚಾರವೆಸಗಿದ್ದಾನೆ. ಈ ವಿಚಾರವನ್ನು ಬಾಲಕಿ ಶಾಲೆಯಲ್ಲಿ ತನ್ನ ಸಹಪಾಠಿಗಳೊಂದಿಗೆ ಹೇಳಿಕೊಂಡಿದ್ದಾಳೆ. ಇದನ್ನು ಕೇಳಿಸಿಕೊಂಡ ಬಾಲಕಿಯ ಗೆಳತಿಯರು ಆಕೆಯ ಪೋಷಕರಿಗೆ ತಿಳಿಸಿದ್ದಾರೆ. ಹೀಗಾಗಿ ಆಕೆಯ ಕುಟುಂಬಸ್ಥರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ತಾಯಿ ಬಾಲಕಿಯ ತಂದೆಯಿಂದ ದೂರವಿದ್ದು, ಬೇರೊಬ್ಬನ ಮದುವೆ ಆಗಿದ್ದಾರೆ. ಅಲ್ಲದೆ ಬಾಲಕಿಯ ಇಬ್ಬರು ಒಟ್ಟಹುಟ್ಟಿದವರು ಕೂಡ ಅಮ್ಮನ ಜೊತೆಯೇ ಇದ್ದಾರೆ.

ನಿರಂತರ ಅತ್ಯಾಚಾರ, ಬೆದರಿಕೆ:
ಬಾಲಕ ತನ್ನ ತಂಗಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಲ್ಲದೇ ಬೆದರಿಕೆ ಕೂಡ ಹಾಕುತ್ತಿದ್ದನು. ಕಳೆದ ಡಿಸೆಂಬರ್ ತಿಂಗಳಲ್ಲಿ ತಂಗಿಯ ಮೇಲೆ ರೇಪ್ ಮಾಡಲು ಆರಂಭಿಸಿದ್ದಾನೆ. ಆಕೆ ಮನೆಯಲ್ಲಿ ಒಬ್ಬಳೇ ಇದ್ದಾಗ ಈ ಕೃತ್ಯವೆಸಗುತ್ತಿದ್ದನು. ಅಲ್ಲದೇ ಅನೇಕ ಸಂದರ್ಭಗಳಲ್ಲೂ ಕೂಡ ಸಹೋದರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದನು ಎಂಬುದು ತನಿಖೆಯ ವೇಳೆ ಬಯಲಾಗಿದೆ.

ಬಾಲಕಿಯ ಕುಟುಂಬಸ್ಥರು ದೂರು ನೀಡುತ್ತಿದ್ದಂತೆಯೇ ವಿಲ್ಲಿವಕ್ಕಮ್ಮ್ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಇಬ್ಬರು ಒಡಹುಟ್ಟಿದವರನ್ನು ತನಿಖೆಗೆ ಒಳಪಡಿಸಿದರು. ಆರೋಪಿ ಬಾಲಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Comments

Leave a Reply

Your email address will not be published. Required fields are marked *