60 ಕೆ.ಜಿ ಚಿನ್ನ ಧರಿಸಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ವಧು!

– ಅತಿಥಿಗಳನ್ನು ಅಚ್ಚರಿಗೊಳಿಸಿದ ಮದುಮಗಳು

ಬೀಜಿಂಗ್: ಜಗತ್ತಿನಾದ್ಯಂತ ಮಹಿಳೆಯರಿಗೆ ಚಿನ್ನ ಅಂದ್ರೆ ಪಂಚಪ್ರಾಣ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅಂತೆಯೇ ಇದೀಗ ವಧು ಬರೋಬ್ಬರಿ 60 ಕೆ.ಜಿ ಚಿನ್ನ ಧರಿಸಿ ಸುದ್ದಿಯಾಗಿದ್ದಾರೆ.

ಹೌದು. ಮದುವೆಯಂದು ಚೀನಾದ ವಧು ಬರೋಬ್ಬರಿ 60 ಕೆಜಿ ಚಿನ್ನದ ಆಭರಣ ತೊಡುವ ಮೂಲಕ ಬಂದಂತಹ ಅತಿಥಿಗಳನ್ನು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ. ಈಕೆಗೆ ಈ ಆಭರಣಗಳನ್ನು ವರನೇ ಉಡುಗೊರೆಯಾಗಿ ನೀಡಿದ್ದಾನೆ.

ವಧು ಮೈತುಂಬಾ ಚಿನ್ನ ಧರಿಸಿ ಕಾರಿನಲ್ಲಿ ಕುಳಿತು ನಗು ಬೀರುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವಧು ಮದುವೆಯ ಧಿರಿಸು ತೊಟ್ಟು, ಚಿನ್ನಾಭರಣ ಧರಿಸಿ ಕಾರಿನಲ್ಲಿ ಕುಳಿತಿದ್ದಾಳೆ. ಅಲ್ಲದೆ ಕೈಯಲ್ಲಿ ಗುಲಾಬಿ ಹೂಗಳನ್ನು ಕೂಡ ಹಿಡಿದುಕೊಂಡಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಟಿಕೆಟ್ ಹಣ ನೀಡುತ್ತಿದ್ದಂತೆ ಥಿಯೇಟರ್‌ನಲ್ಲೇ ಕುಸಿದು ಬಿದ್ದ ಕಿಚ್ಚನ ಅಭಿಮಾನಿ

ಒಟ್ಟಿನಲ್ಲಿ ವಧು ಇಷ್ಟೊಂದು ಆಭರಣ ಧರಿಸಿ ಕಲ್ಯಾಣ ಮಂಟಪಕ್ಕೆ ಕಾಲಿಡುತ್ತಿದ್ದಂತೆಯೇ ನೆರೆದಿದ್ದ ಅತಿಥಿಗಳು ಅಚ್ಚರಿಗೊಳಗಾಗಿದ್ದಾರೆ. ಅಷ್ಟೊಂದು ಭಾರವಾದ ಚಿನ್ನವನ್ನು ಧರಿಸಿಕೊಂಡು ನಡೆದು ಬರುತ್ತಿರುವುದನ್ನು ನೋಡಿ ಆಶ್ಚರ್ಯ ಪಟ್ಟಿದ್ದಾರೆ. ಈ ವೇಳೆ ವಧು, ಮದುವೆಯ ಸಮಾರಂಭವನ್ನು ಮುಂದುವರಿಸುವಂತೆ ಕೇಳಿಕೊಂಡಿದ್ದಾಳೆ.

ವರ ಶ್ರೀಮಂತ ಕುಟುಂಬದಿಂದ ಬಂದವನಾಗಿದ್ದು, ವಧುವಿಗೆ 60 ಚಿನ್ನದ ನೆಕ್ಲೆಸ್ ನೀಡಲಾಯಿತು. ಜೊತೆಗೆ ಎರಡು ದೊಡ್ಡದಾದ ಬಳೆಗಳನ್ನು ವಧುವಿಗೆ ನೀಡಲಾಗಿದೆ ಎಂಬುದಾಗಿ ವರದಿಯಾಗಿದೆ.

Comments

Leave a Reply

Your email address will not be published. Required fields are marked *