ವರ ಮದುವೆ ಮಂಟಪಕ್ಕೆ ಬರ್ತಿದ್ದಂತೆ ಮದ್ವೆ ಕ್ಯಾನ್ಸಲ್ ಮಾಡಿದ ವಧು..!

ಪಾಟ್ನಾ: ವರ ಮದುವೆ ಮಂಟಪಕ್ಕೆ ಬರುತ್ತಿದ್ದಂತೆಯೇ ವಧು ತನ್ನ ವಿವಾಹವನ್ನೇ ಕ್ಯಾನ್ಸಲ್ ಮಾಡಿದ ಘಟನೆ ಶನಿವಾರ ಬಿಹಾರದ ಚಾಪ್ರದಲ್ಲಿ ನಡೆದಿದೆ.

ರಿಂಕಿ ಕುಮಾರಿ ಮದುವೆಯನ್ನು ಕ್ಯಾನ್ಸಲ್ ಮಾಡಿದ ವಧು. ರಿಂಕಿ ಮದುವೆ ಬಬ್ಲು ಕುಮಾರ್ ಜೊತೆ ನಿಶ್ಚಯವಾಗಿತ್ತು. ಇಬ್ಬರ ಮದುವೆ ನಡೆಯಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ವಧು ಮದುವೆಯನ್ನೇ ರದ್ದುಗೊಳಿಸಿದ್ದಾಳೆ.

ವಧು-ವರರಿಗಾಗಿ ಮದುವೆ ಮಂಟಪದಲ್ಲಿ ಕಾಯುತ್ತಿದ್ದ ವೇಳೆ ಬಬ್ಲು ಕುಡಿದ ಮತ್ತಿನಲ್ಲಿ ಮದುವೆ ಮನೆಗೆ ಆಗಮಿಸಿದ್ದಾನೆ. ಅಲ್ಲದೆ ಅಲ್ಲಿ ನರೆದಿದ್ದ ಸಂಬಂಧಿಕರ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಇದನ್ನು ನೋಡಿದ ರಿಂಕಿ ವರ ಬಬ್ಲುನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ ಎಂದು ವಧುವಿನ ತಂದೆ ತ್ರಿಭುವನ್ ಶಾ ತಿಳಿಸಿದ್ದಾರೆ.

ವರನ ಸ್ಥಿತಿ ನೋಡಿದ ಸಂಬಂಧಿಕರು ಆತನಿಗೆ ಮದುವೆಯ ಶಾಸ್ತ್ರಗಳನ್ನು ನೆರವೇರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಕೋಪಗೊಂಡ ರಿಂಕಿ ಮದುವೆ ಮನೆಯಿಂದ ಹೊರ ನಡೆದಿದ್ದಾಳೆ. ಬಳಿಕ ಇಬ್ಬರ ಕುಟುಂಬದವರು ರಿಂಕಿಗೆ ಈ ಮದುವೆಗೆ ಒಪ್ಪಿಸಲು ಪ್ರಯತ್ನಿಸಿದ್ದಾರೆ. ಆದರೆ ರಿಂಕಿ, ಬಬ್ಲುನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ.

ರಿಂಕಿ ಮದುವೆಗೆ ನಿರಕಾರಿಸುತ್ತಿದ್ದಂತೆ ವಧುವಿನ ಕುಟುಂಬದವರು ವರದಕ್ಷಿಣೆಗೆ ನೀಡಿದ ಹಣವನ್ನು ಹಿಂತಿರುಗಿಸಲು ಹೇಳಿದ್ದಾರೆ. ಅಲ್ಲದೆ ಆ ಹಣ ಹಿಂತಿರುಗಿಸುವವರೆಗೂ ವರನ ಕುಟುಂಬದವರನ್ನು ಬಿಡಲಿಲ್ಲ. ಹಣ ನೀಡಿದ ಬಳಿಕ ಅವರನ್ನು ಅಲ್ಲಿಂದ ಹೋಗಲು ಅನುಮತಿ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *