ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ವಧು!

ಕೊಡಗು: ರಾಜ್ಯಾದ್ಯಂತ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮಡಕೇರಿಯಲ್ಲಿ ಮದುವೆಗೂ ಮುನ್ನ ಮದುಮಗಳು ತಮ್ಮ ಮತವನ್ನು ಚಲಾಯಿಸಿದ್ದಾರೆ.

ಸ್ಮಿತಾ ಮಡಿಕೇರಿ ತಾಲೂಕಿನ ಕಾಂಡನಕೊಲ್ಲಿ ಮತಗಟ್ಟಿ ಸಂಖ್ಯೆ 131 ಯಲ್ಲಿ ತಮ್ಮ ಮತ ಚಲಾಯಿಸಿದ್ದಾರೆ. ಮದುಮಗಳಂತೆ ಅಲಂಕರಿಸಿ ಮತಗಟ್ಟೆಗೆ ಆಗಮಿಸಿದ ಸ್ಮಿತಾ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.

ಸ್ಮಿತಾ ಇಂದು ಗೌಡ ಸಮಾಜದಲ್ಲಿ ಮದುವೆ ಆಗುತ್ತಿದ್ದು, ಮಡಿಕೇರಿಯ ಮೂವತೊಕ್ಕಲಿನ ಬಿಎಂಟಿಸಿ ಸಿಬ್ಬಂದಿ ಆದ ಪ್ರವೀಣ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಮಂಗಳೂರಿನಲ್ಲೂ ಕೂಡ ವಧುವೊಬ್ಬರು ತಮ್ಮ ಮತ ಚಲಾಯಿಸಿದ್ದಾರೆ. ನಗರದ ಬೋಂದೆಲ್ ಸೇಂಟ್ ಲಾರೆನ್ಸ್ ಮೀಡಿಯಂ ಶಾಲೆಯಲ್ಲಿ ಮತದಾನ ನಡೆಯುತ್ತಿದ್ದು, ಪಚ್ಚನಾಡಿಯ ಮದುಮಗಳು ವಿಯೋಲಾ ಮಾರಿಯಾ ಫೆರ್ನಾಂಡೀಸ್ ಮತದಾನ ಮಾಡಿದ್ದಾರೆ.

7 ಗಂಟೆಗೆ ಮತದಾನ ಮಾಡಿ ಬಳಿಕ ಬೆಳ್ತಂಗಡಿಯಲ್ಲಿ ನಡೆಯೋ ಮದುವೆಗೆ ಮದುಮಗಳು ತೆರಳಿದ್ದಾರೆ. ಬೆಳ್ತಂಗಡಿಯ ವರ ಸಿಲ್ವೆಸ್ಟರ್ ರೋಡ್ರಿಗಸ್ ಜೊತೆ ಮಾರಿಯಾ ಮದುವೆ ನಡೆಯಲಿದೆ. ಒಟ್ಟಿನಲ್ಲಿ ವಿಯೋಲಾ ಹಾಗೂ ಸ್ಮಿತಾ ಅವರು ಮದುವೆಗೂ ಮುನ್ನ ಮತದಾನ ಮಾಡಿ ಮಾದರಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *