ವರನ ಜೊತೆ ವೇದಿಕೆ ಹತ್ತಿದ ವಧುವಿಗೆ ಗುಂಡು

ನವದೆಹಲಿ: ಅಪರಿಚಿತ ವ್ಯಕ್ತಿಯೊಬ್ಬ ಮದುವೆ ಮಂಟಪಕ್ಕೆ ಬಂದು ಏಕಾಏಕಿ ವಧುವಿಗೆ ಗುಂಡು ಹಾರಿಸಿರುವ ಘಟನೆ ದೆಹಲಿಯ ಸಹಕಾರ್‍ಪುರದಲ್ಲಿ ನಡೆದಿದೆ.

19 ವರ್ಷದ ವಧು ಪೂಜಾ ಮೇಲೆ ಗುಂಡು ಬಿದ್ದಿದೆ. ಗುರುವಾರ ವಧು-ವರ ಇಬ್ಬರು ಮದುವೆಯ ವೇದಿಕೆಗೆ ಬಂದು ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಕಾರ್ಯಕ್ರಮವಿತ್ತು. ಆದರೆ ವೇದಿಕೆಯ ಮೇಲೆ ಬರುತ್ತಿದ್ದ ವಧು ಪೂಜಾ ಮೇಲೆ ಅಪರಿಚಿತನೊಬ್ಬ ಏಕಾಏಕಿ ಗುಂಡು ಹಾರಿಸಿ ಪರಾರಿಯಾಗಿದ್ದಾನೆ.

ಅಪರಿಚಿತ ವ್ಯಕ್ತಿ ಹಾರಿಸಿದ ಗುಂಡು ಅದೃಷ್ಟವಶಾತ್ ವಧು ಪೂಜಾ ಕಾಲಿಗೆ ಬಿದ್ದಿದೆ. ತಕ್ಷಣ ವಧುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ವಧು ಪೂಜಾಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ನಂತರ ಮತ್ತೆ ಮದುವೆ ಕಾರ್ಯಕ್ರಮವನ್ನು ಮುಂದುವರಿಸಲಾಗಿದೆ.

ವಧು ಗುಂಡು ಹಾರಿಸಿದ ವ್ಯಕ್ತಿಯನ್ನು ಗುರುತಿಸಿದ್ದಾಳೆ. ಆದರೆ ವರನಿಗೆ ಆತನನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಸದ್ಯಕ್ಕೆ ಈ ಕುರಿತು ತನಿಖೆ ಮುಂದುವರಿದಿದೆ. ಆರೋಪಿ ಉದ್ದೇಶಪೂರ್ವಕ್ಕಾಗಿ ಗುಂಡು ಹಾರಿಸಿದ್ದು, ಆತನ ಉದ್ದೇಶ ಏನೆಂಬುದುವುದು ತಿಳಿದು ಬಂದಿಲ್ಲ. ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಇತ್ತ ಮದುವೆ ಮಂಟಪದಲ್ಲಿ ವಧುವಿನ ಮೇಲೆ ಗುಂಡು ಹಾರಿಸಿದ್ದರಿಂದ ಕೆಲವು ಸಮಯ ಭಯದ ವಾತಾವರಣ ಉಂಟಾಗಿತ್ತು. ಆದರೆ ಈ ಅವಘಡದಿಂದ ಯಾರಿಗೂ ಅಪಾಯವಾಗಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *