ಕಲ್ಯಾಣಮಂಟಪದಿಂದ ಪ್ರಿಯಕರನ ಜೊತೆ ವಧು ಎಸ್ಕೇಪ್ – ಮುರಿದುಬಿತ್ತು ಮದುವೆ

ಚಿಕ್ಕಬಳ್ಳಾಪುರ: ಮೊನ್ನೆ ಮೊನ್ನೆಯಷ್ಟೇ ಮೈಸೂರಿನಲ್ಲಿ ತಾಳಿ ಕಟ್ಟೋ ಕೊನೆ ಘಳಿಗೆಯಲ್ಲಿ ವಧು ತಲೆ ಸುತ್ತಿ ಬಿದ್ದು ನಾಟಕ ಮಾಡುವ ಮೂಲಕ ಮದುವೆ ಮುರಿದಿದ್ದಳು. ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲೂ ರಾತ್ರಿ ಆರತಕ್ಷತೆಯಲ್ಲಿ ಭಾಗಿಯಾದ ವಧು ರಾತ್ರೋ ರಾತ್ರಿ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದು, ಮದುವೆ ಮುರಿದುಬಿದ್ದಿದೆ.

ಹೌದು ಗೌರಿಬಿದನೂರು ನಾಗರೆಡ್ಡಿ ಬಡಾವಣೆಯ ವಧು ವೆನ್ನಲ ಹಾಗೂ ಕರೇಕಲ್ಲಹಳ್ಳಿಯ ವರ ಸುರೇಶ್ ಮದುವೆ ನಿಶ್ಚಯವಾಗಿತ್ತು. ಗುರು ಹಿರಿಯರ ನಿಶ್ಚಯಿಸಿದಂತೆ ವಿದುರಾಶ್ವತ್ಥ ಗ್ರಾಮದ ಚನ್ನರಾಯಸ್ವಾಮಿ ಕಲ್ಯಾಣಮಂಟಪದಲ್ಲಿ ರಾತ್ರಿ ಆರತಕ್ಷತೆಯೂ ನೇರವೇರಿತ್ತು. ಆದರೆ ರಾತ್ರೋರಾತ್ರಿ ವಧು ವೆನ್ನಲ ತನ್ನ ಪ್ರಿಯಕರ ಸೋದರ ಮಾವ ಪ್ರವೀಣ್ ಜೊತೆ ಎಸ್ಕೇಪ್ ಆಗಿದ್ದಾಳೆ. ಇದನ್ನೂ ಓದಿ: ಐಶ್ವರ್ಯ ರಜನೀಕಾಂತ್ ನಿರ್ದೇಶನದಲ್ಲಿ ಸೌರವ್ ಗಂಗೂಲಿ ಬಯೋಪಿಕ್

ಇದರಿಂದ ಇಂದು ನಡೆಯಬೇಕಿದ್ದ ಮದುವೆ ಮುರಿದುಬಿದ್ದಿದೆ. ಹೀಗಾಗಿ ಸಂಬಂಧಿಕರು ಗೌರಿಬಿದನೂರು ನಗರ ಪೊಲೀಸರ ಮೊರೆ ಹೋಗಿದ್ದು ವಧು ನಾಪತ್ತೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಸದ್ಯ ವಧುವರರ ಸಂಬಂಧಿಕರು ಪೊಲೀಸ್ ಠಾಣೆ ಬಳಿ ಸೇರಿದ್ದು. ಪರಾರಿಯಾದ ವಧು ಹಾಗೂ ಪ್ರಿಯಕರ ಪ್ರವೀಣ್ ಸಹ ಠಾಣೆಗೆ ಬರುವುದಾಗಿ ತಿಳಿಸಿದ್ದಾರಂತೆ. ಹೀಗಾಗಿ ವಧು ಹಾಗೂ ಪ್ರಿಯಕರ ಬಂದ ನಂತರ ಮುಂದೇನಾಗುತ್ತೋ ಕಾದು ನೋಡಬೇಕಿದೆ. ಇದನ್ನೂ ಓದಿ: ತಾಳಿ ಕಟ್ಟುವಾಗ ಕುಸಿದುಬಿದ್ದಂತೆ ವಧು ನಾಟಕ – ಕೊನೆ ಕ್ಷಣದಲ್ಲಿ ಮುರಿದುಬಿತ್ತು ಮದುವೆ

Comments

Leave a Reply

Your email address will not be published. Required fields are marked *