ದಯವಿಟ್ಟು ನನ್ನ ಹೆಂಡತಿಯನ್ನು ನನಗೆ ಕೊಡಿ- ಕಣ್ಣೀರು ಹಾಕಿದ ವರ

ನೆಲಮಂಗಲ: ದಂಪತಿ ಮದುವೆಯಾಗಿ ಕೇವಲ ಆರೇ ದಿನ ಆಗಿತ್ತು. ಬದುಕಿನ ಸುಂದರ ಕನಸುಗಳನ್ನು ಕಾಣುತ್ತಾ ಇದ್ದರು. ಆದರೆ ಎರಡು ವರ್ಷದ ಪ್ರೀತಿಗೆ ಕಡೆಗೂ ಮದುವೆಯ ಕಂಕಣ ಬಿತ್ತಲ್ಲ ಅನ್ನೋ ಖುಷಿಗಿಂತ ಭಯದಲ್ಲೇ ಇರುವಂತಾಗಿದೆ. ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ 30 ಜನರ ಗ್ಯಾಂಗ್‍ವೊಂದು ನವವಧುವನ್ನು ಕಿಡ್ನಾಪ್ ಮಾಡಿಕೊಂಡು ಹೋಗಿದೆ.

ದಯವಿಟ್ಟು ನನ್ನ ಹೆಂಡತಿಯನ್ನು ನನಗೆ ಕೊಡಿ. ನನ್ನ ಪತ್ನಿಗೆ ಏನೂ ತೊಂದರೆ ಕೊಡಬೇಡಿ. ನನ್ನವಳನ್ನು ನನ್ನಿಂದ ದೂರ ಮಾಡಬೇಡಿ ಎಂದು ವರನು ತನ್ನ ಅಳಲು ತೊಡಿಕೊಂಡಿದ್ದಾನೆ.

ಗಂಗಾಧರಯ್ಯ ಅಳಲು ತೋಡಿಕೊಂಡ ವರ. ಜಲಜಾ ಕಿಡ್ನಾಪ್ ಆದ ವಧು. ಇಬ್ಬರೂ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ವಧುವಿನ ಪೋಷಕರ ವಿರೋಧದ ನಡುವೆ ಕಳೆದ ಮೇ 25ರಂದು ತುಮಕೂರಿನ ಸಾಸಲು ಬಳಿಯ ದೇವಾಲಯದಲ್ಲಿ ಮದುವೆಯಾಗಿದ್ದರು. ಹೀಗಾಗಿ ಮದುವೆಗೆ ಯಾವುದೇ ತೊಂದರೆ ಆಗಲ್ಲ ಅಂತ ಈ ಜೋಡಿ ಅಂದುಕೊಂಡಿತ್ತು. ಆದರೆ ಯುವತಿಯ ಪೋಷಕರೇ ಪ್ರೇಮಿಗಳಿಗೆ ಅಡ್ಡಲಾಗಿದ್ದಾರೆ. ಇದನ್ನೂ ಓದಿ: ದೇಶದ ಒಳಿತಿಗಾಗಿ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿದವರಿಗೆ ಕೊಡುವ ಬೆಲೆ ಇದೆಯೇ?: ಕೇಂದ್ರ ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ

ಪೋಷಕರ ವಿರೋಧದ ನಡುವೆ ನೆಲಮಂಗಲದಲ್ಲಿ ಮೇ 30ರಂದು ರಿಜಿಸ್ಟರ್ ಕೂಡ ಮಾಡಿಸಿದ್ದರು. ಊರಲ್ಲೆ ಇದ್ದರೆ ಸಮಸ್ಯೆ ಆಗುತ್ತೆ ಅಂತ ಭಯಗೊಂಡ ಜೋಡಿ, ಬೆಂಗಳೂರಿನ ಬ್ಯಾಡರಹಳ್ಳಿಯ ಅಕ್ಕನ ಮನೆಗೆ ಬಂದಿತ್ತು. ಆದರೆ ಮಧ್ಯರಾತ್ರಿ ಪೊಲೀಸರ ಸೋಗಿನಲ್ಲಿ ಬಂದು ಹಲ್ಲೆ ಮಾಡಿ ಯುವತಿಯನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರೆ ಅಂತ ವರ ಆರೋಪಿಸಿದ್ದಾರೆ. ಇದನ್ನೂ ಓದಿ: ಸಚಿವ ಬಿ.ಸಿ ನಾಗೇಶ್ ಮನೆ ಮೇಲೆ NSUI ದಾಳಿ

ಪ್ರೀತಿಸಿದ ಹೃದಯಗಳ ಜೊತೆ ಕೊನೆವರೆಗೂ ಖುಷಿಯಾಗಿರಬೇಕು ಅಂದುಕೊಂಡಿದ್ದ ಈ ಜೋಡಿಗೆ ಪೋಷಕರೇ ವಿಲನ್ ಆಗಿದ್ದಾರೆ. ಸದ್ಯ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Comments

Leave a Reply

Your email address will not be published. Required fields are marked *