ವಿಡಿಯೋ: ಮದ್ವೆ ಮಂಟಪದಲ್ಲಿ ಅಲ್ಲಾಡ್ಸ್ ಅಲ್ಲಾಡ್ಸ್ ಹಾಡಿಗೆ ಕುಣಿದ ವಧು ವರರು- ಕಣ್ಣುದಾನ ಮಾಡಿ ಆದರ್ಶ ಮೆರೆದ ನವದಂಪತಿ

ತುಮಕೂರು: ಮದುವೆ ಮಂಟಪದಲ್ಲೇ ವಧು ವರರು ಕನ್ನಡ ಚಿತ್ರದ ಹಾಡೊಂದಕ್ಕೆ ಸ್ಟೆಪ್ ಹಾಕಿ ಕುಣಿದು ಕುಪ್ಪಳಿಸಿದ ಅಪರೂಪದ ಘಟನೆ ತುಮಕೂರಿನಲ್ಲಿ ನಡೆದಿದೆ.

ಜಿಲ್ಲೆಯ ಚಿಕ್ಕನಾಯಕನಹಳ್ಳಿ ಕಾಂಗ್ರೆಸ್ ಮುಖಂಡ ಕೃಷ್ಣೆಗೌಡರ ಪುತ್ರಿ ಮಾನಸ ಅವರಿಗೆ ಮಂಜುನಾಥ ಜೊತೆ ಹುಳಿಯಾರಿನ ಸೇವಾಲಾಲ್ ಸದನದಲ್ಲಿ ವಿವಾಹ ಮಹೋತ್ಸವ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ವಧು ವರರಿಬ್ಬರೂ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಹಾಡಿಗೆ ಮಂಟಪದಲ್ಲೇ ಕುಣಿದು ನೆರೆದವರನ್ನು ರಂಜಿಸಿದ್ದಾರೆ.

ವಧು ಮಾನಸ, ವರ ಮಂಜುನಾಥ ಕೈಕೈ ಹಿಡಿದು ಸಖತ್ ಸ್ಟೆಪ್ ಹಾಕಿದ್ದಾರೆ. ಈ ನವ ಜೋಡಿಗೆ ಇತರೆ ಸ್ನೇಹಿತರು ಸಾಥ್ ಕೊಟ್ಟಿದ್ದಾರೆ. ಇದರ ಜೊತೆಗೆ ಇನ್ನೊಂದು ವಿಶೇಷ ಕ್ಷಣಕ್ಕೆ ಈ ಮದುವೆ ಸಾಕ್ಷಿಯಾಗಿತ್ತು. ಸಪ್ತಪದಿ ತುಳಿದ ಮರುಘಳಿಗೆಯಲ್ಲೇ ನವದಂಪತಿ ಕಣ್ಣುದಾನ ಮಾಡಿ ಗಮನ ಸೆಳೆದರು.

ಕಣ್ಣುದಾನ ಮಾಡುವುದಾಗಿ ಪತ್ರಕ್ಕೆ ಸಹಿ ಹಾಕಿ ದಂಪತಿ ಆದರ್ಶ ಮೆರೆದಿದ್ದಾರೆ.

https://www.youtube.com/watch?v=bmRG9jufs2A

Comments

Leave a Reply

Your email address will not be published. Required fields are marked *