13 ವರ್ಷದ ಬಾಲಕನಿಂದ ಶಿಕ್ಷಕಿಯ ಕೊಲೆ

ಮುಂಬೈ: 13 ವರ್ಷದ ಬಾಲಕನೊಬ್ಬ ತನ್ನ ಟ್ಯೂಷನ್ ಶಿಕ್ಷಕಿಯನ್ನೇ ಕೊಲೆಗೈದಿರುವ ಘಟನೆ ಮುಂಬೈನ ಗೊವಂಡಿ ಪ್ರದೇಶದಲ್ಲಿ ನಡೆದಿದೆ.

ಮೃತ ದುರ್ದೈವಿ ಶಿಕ್ಷಕಿಯನ್ನು 30 ವರ್ಷದ ಆಯಿಷಾ ಅಸ್ಲಾಂ ಎಂದು ಗುರುತಿಸಲಾಗಿದೆ. ಈಕೆಯನ್ನು ಚಾಕುವಿನಿಂದ ಇರಿದು ಕೊಲೆಗೈದ 13 ವರ್ಷದ ಬಾಲಕನನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಘಟನೆ ಸೋಮವಾರ ರಾತ್ರಿ 8.30ರ ಸುಮಾರಿಗೆ ನಡೆದಿದೆ. ಈ ಹಿಂದೆ ಬಾಲಕನ ತಾಯಿ ಮತ್ತು ಶಿಕ್ಷಕಿಯ ನಡುವೆ ವಾಗ್ವಾದ ನಡೆದಿತ್ತು. ಇದೇ ಸಿಟ್ಟಿನಿಂದ ಬಾಲಕ ಶಿಕ್ಷಕಿಯನ್ನು ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.

7 ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ಆಯಿಷಾ ಅವರ ಟ್ಯೂಷನ್ ಕ್ಲಾಸಿಗ್ ಬಂದಿದ್ದಾನೆ. ಬಾಲಕ ಹೋಂವರ್ಕ್ ಮಾಡಿಲ್ಲವೆಂದು ಶಿಕ್ಷಕಿ ಆತನನ್ನು ಕ್ಲಾಸಿನಿಂದ ಹೊರಗೆ ಹಾಕಿದ್ದಾರೆ. ಇದರಿಂದ ಬೇಸರಗೊಂಡ ಬಾಲಕ ನೇರವಾಗಿ ಮನೆಗೆ ತೆರಳಿದ್ದಾನೆ. ಅಲ್ಲದೆ ಮನೆಯ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಮತ್ತೆ ಕ್ಲಾಸಿಗೆ ಬಂದಿದ್ದಾನೆ. ಹೀಗೆ ಬಂದವನ್ನು ಶಾಲೆಯ ಬಾತ್ ರೂಮಿನಿಲ್ಲಿ ಮುಖ ತೊಳೆಯುತ್ತಿದ್ದ ಶಿಕ್ಷಕಿಗೆ ಹಿಂದಿನಿಂದ ಚಾಕುವಿನಿಂದ ಇರಿದಿದ್ದಾನೆ. ಹಲವು ಬಾರಿ ಹೊಟ್ಟೆಗೆ ಇರಿದಿದ್ದು, ಚಾಕುವೇ ಶಿಕ್ಷಕಿಯ ಹೊಟ್ಟೆಯಲ್ಲೇ ಸಿಲುಕಿಕೊಂಡಿದೆ ಎಂದು ಆಯಿಷಾ ಸಹೋದ್ಯೋಗಿ ಸ್ಟೆಲ್ಲ ಡಿ ಸೋಜಾ ನಡೆದ ಘಟನೆಯನ್ನು ವಿವರಿಸಿದ್ದಾರೆ.

ಶಾಲೆಯ ಹತ್ತಿರವೇ ಶಿಕ್ಷಕಿ ಆಯಿಷಾ ಮನೆಯಿದ್ದು ಆಕೆ ಒಬ್ಬರೇ ನೆಲೆಸಿದ್ದರು. ಘಟನೆ ಸಂಬಂಧ ಆಯಿಷಾ ತಾಯಿ ಪ್ರತಿಕ್ರಿಯಿಸಿ ಇದೊಂದು ದುರಂತ ಸಂಗತಿ ಎಂದು ತಿಳಿಸಿದ್ದಾರೆ.

ಚಾಕುವಿನಿಂದ ಇರಿದ ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಯಿಷಾಗೆ ಮಾತನಾಡಲು ಕಷ್ಟವಾಗುತ್ತಿತ್ತು. ಕೂಡಲೇ ಆಯಿಷಾರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಆಕೆಯ ಗಂಭೀರತೆಯನ್ನು ಪರಿಗಣಿಸಿದ ವೈದ್ಯರು ಸಿಯೋನ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಕೂಡಲೇ ಅಂಬುಲೆನ್ಸ್ ನಲ್ಲಿ ಸಿಯೋನ್ ಆಸ್ಪತ್ರೆಗೆ ಕರೆತಂದು ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಮರುದಿನ ನಸುಕಿನ ಜಾವ 3.30ರ ಸುಮಾರಿಗೆ ಆಕೆ ಮೃತಪಟ್ಟಿದ್ದಾರೆ ಎಂದು ಡಿಸೋಜಾ ತಿಳಿಸಿದ್ದಾರೆ.

ಇದಕ್ಕೂ ಕೆಲ ಗಂಟೆಗಳ ಮೊದಲು ಶಿವಾಜಿ ನಗರ ಪೊಲೀಸರು ಘಟನೆ ಕುರಿತು ಬಾಲಕನನ್ನು ವಶಕ್ಕೆ ಪಡೆದರು. ಅಲ್ಲದೆ ಹೆತ್ತವರನ್ನು ವಿಚಾರಣೆ ನಡೆಸಬೇಕೆಂದು ಸಮನ್ಸ್ ನೀಡುವ ಮುನ್ನವೇ ಘಟನೆಯ ಮಾಹಿತಿ ತಿಳಿದು ಬಾಲಕನ ತಾಯಿ ಕುಸಿದು ಬಿದ್ದು, ಸಿಯೋನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

Comments

Leave a Reply

Your email address will not be published. Required fields are marked *