ಬುಡಕಟ್ಟು ಸಮುದಾಯದ ಬಾಲಕಿಗೆ ಹಿಗ್ಗಾಮುಗ್ಗ ಥಳಿಸಿದ ಬಾಲಕ – ಕ್ರಮಕ್ಕೆ ಸಿಎಂ ಸೂಚನೆ

ರಾಂಚಿ: ಜಾರ್ಖಂಡ್‍ನ ದುಮ್ಕಾ ಜಿಲ್ಲೆಯಲ್ಲಿ ಶಾಲಾ ಬಾಲಕಿಯೊಬ್ಬಳಿಗೆ 16 ವರ್ಷದ ಬಾಲಕ ಕಾಲಿನಿಂದ ಒದ್ದು ಕ್ರೌರ್ಯ ಮೆರೆದಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಆರೋಪಿ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಾಲಕಿ ಪಾಕುರ್ ಜಿಲ್ಲೆಯ ಶಾಲೆಯೊಂದರ ಬುಡಕಟ್ಟು ವಿದ್ಯಾರ್ಥಿಯಾಗಿದ್ದು, ವೀಡಿಯೋದಲ್ಲಿ ಸಮವಸ್ತ್ರ ಧರಿಸಿ, ಕೈಯಲ್ಲಿ ಬ್ಯಾಗ್ ಹಿಡಿದುಕೊಂಡಿದ್ದ ಬಾಲಕಿಗೆ ಪದೇ, ಪದೇ ಕಾಲಿನಿಂದ ಬಾಲಕ ಒದಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಸ್ಟಾರ್ಟ್ ಆಗುತ್ತಾ ಮತ್ತೊಂದು ಟೆರಿಟೋರಿ ವಾರ್?

ಸದ್ಯ ಈ ಘಟನೆ ವೀಡಿಯೋವನ್ನು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ದಯವಿಟ್ಟು ಈ ವಿಚಾರವಾಗಿ ತನಿಖೆ ನಡೆಸಿ ನಂತರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಿ ತಿಳಿಸಿದ್ದಾರೆ. ಇದನ್ನೂ ಓದಿ: ಶಾಲಾ ಪಠ್ಯದಲ್ಲಿ ಕೆಂಪೇಗೌಡ, ಸಿದ್ದರೂಢ ಜಾತ್ರೆ – ಮೋದಿ `ವೋಕಲ್ ಫಾರ್ ಲೋಕಲ್’ ಮಂತ್ರವೂ ಸೇರ್ಪಡೆ

ಕೂಡಲೇ ಈ ಸಂಬಂಧ ತನಿಖೆ ಆರಂಭಿಸಿದ ಪೊಲೀಸರಿಗೆ ಬಾಲಕ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ದುಮ್ಕಾ ಜಿಲ್ಲೆಯ ನಿವಾಸಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಹದಿನೈದು ದಿನಗಳ ಹಿಂದೆ ಈ ಘಟನೆ ಸಂಭವಿಸಿದೆ. ಆದರೆ ಈ ವೀಡಿಯೋ ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ. ಅಲ್ಲದೇ ಮೇಲ್ನೋಟಕ್ಕೆ ಇದೊಂದು ಪ್ರೇಮ ಪ್ರಕರಣ ಎಂದು ಕಾಣಿಸುತ್ತದೆ ಎಂದು ದುಮ್ಕಾ ಉಪವಿಭಾಗದ ಪೊಲೀಸ್ ಅಧಿಕಾರಿ (ಎಸ್‍ಡಿಪಿಒ) ನೂರ್ ಮುಸ್ತಫಾ ಅನ್ಸಾರಿ ಹೇಳಿದ್ದಾರೆ.

ಹುಡುಗ ಮತ್ತು ಹುಡುಗಿ ಇಬ್ಬರೂ ಬುಡಕಟ್ಟು ಸಮುದಾಯದವರಾಗಿದ್ದು, ಇದೀಗ ಅವರನ್ನು ವಿಚಾರಣೆಗಾಗಿ ಗೋಪಿಕಂದರ್ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಹುಡುಗ ಅಪ್ರಾಪ್ತನಾಗಿರುವುದರಿಂದ ಅವನನ್ನು ರಿಮ್ಯಾಂಡ್ ಹೋಮ್‍ಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *