ಮನೆ ಕಟ್ಟಲು 23 ಲಕ್ಷ ಹಣಕ್ಕಾಗಿ ವಿದ್ಯಾರ್ಥಿ ಅಪಹರಿಸಿ ಹತ್ಯೆ

ಮುಂಬೈ: ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದ ವಿದ್ಯಾರ್ಥಿನಿಯನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ (Maharashtra) ಥಾಣೆಯಲ್ಲಿ ನಡೆದಿದೆ.

ಪ್ರಕರಣದ ಪ್ರಮುಖ ಆರೋಪಿ ಸಲ್ಮಾನ್‌ ಮೌಲ್ವಿ ಎಂದು ತಿಳಿದುಬಂದಿದೆ. ಈತ ಹೊಸ ಮನೆ ಕಟ್ಟಲು ಯೋಜಿಸಿದ್ದ. ಅದಕ್ಕಾಗಿ ಹಣ ಬೇಕಿತ್ತು. ಮೌಲ್ವಿ ಇದ್ದ ಪ್ರದೇಶದಲ್ಲೇ ವಾಸವಾಗಿದ್ದ ಟೈಲರ್‌ ಸಲ್ಮಾನ್‌ನಿಂದ 23 ಲಕ್ಷ ರೂ. ಸುಲಿಗೆ ಮಾಡುವ ಉದ್ದೇಶ ಹೊಂದಿದ್ದ. ಇದನ್ನೂ ಓದಿ: ಮುಂಬೈ ಪೊಲೀಸರ ಸೋಗಿನಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ – ಎಫ್‍ಐಆರ್ ದಾಖಲು

ಹೀಗಾಗಿ, ಇಬಾದ್‌ನನ್ನು ಅಪಹರಿಸಲು ಯೋಜನೆ ರೂಪಿಸಿದ್ದ. ಮನೆ ನಿರ್ಮಾಣಕ್ಕೆ ಹಣಕಾಸಿನ ಅಗತ್ಯತೆಯಿಂದ ಈ ಹೇಯ ಕೃತ್ಯ ನಡೆಸುವ ಉದ್ದೇಶ ಹೊಂದಿದ್ದ. ಸಂಜೆಯ ಪ್ರಾರ್ಥನೆಯ ನಂತರ ಮನೆಗೆ ಹಿಂದಿರುಗಿರಲಿಲ್ಲ. ಇದರಿಂದ ಅನುಮಾನಗೊಂಡ ಪೋಷಕರು ಹುಡುಕಾಟ ನಡೆಸಿದ್ದರು. ಮುದ್ದಾಸಿರ್‌ಗೆ, ನಿಮ್ಮ ಮಗ ಇಬಾದ್‌ ಸುರಕ್ಷಿತವಾಗಿ ಮನೆಗೆ ವಾಪಸ್‌ ಆಗಬೇಕೆಂದರೆ ಹಣ ಕೊಡಬೇಕು ಎಂದು ಬೆದರಿಕೆ ಕರೆ ಬಂದಿತ್ತು.

ಈ ವಿಚಾರವನ್ನು ಮುದ್ದಾಸಿರ್‌ ಪೊಲೀಸರಿಗೆ ತಿಳಿಸಿದರು. ಸೋಮವಾರ ಮಧ್ಯಾಹ್ನ ಪೊಲೀಸರು ಆರೋಪಿ ಸಲ್ಮಾನ್ ನಿವಾಸದ ಸ್ಥಳವನ್ನು ಪತ್ತೆಹಚ್ಚಿದರು. ಅಷ್ಟೊತ್ತಿಗಾಗಲೇ ಬಾಲಕನ ಹತ್ಯೆಯಾಗಿತ್ತು. ಇಬಾದ್‌ನ ದೇಹವನ್ನು ಗೋಣಿಚೀಲದಲ್ಲಿ ತುಂಬಿ, ಮನೆಯ ಹಿಂದೆ ನಿರ್ದಯವಾಗಿ ಮರೆಮಾಡಲಾಗಿತ್ತು. ಇದನ್ನೂ ಓದಿ: ಪಾಕಿಸ್ತಾನದ 2ನೇ ಅತಿ ದೊಡ್ಡ ನೌಕಾ ವಿಮಾನ ನಿಲ್ದಾಣದ ಮೇಲೆ ದಾಳಿ

ಸಲ್ಮಾನ್ ಹಾಗೂ ಸಹೋದರ ಸಫುವಾನ್ ಮೌಲ್ವಿಯನ್ನು ಅಪಹರಣ, ಕೊಲೆಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಎಫ್‌ಐಆರ್ ದಾಖಲಾಗಿದ್ದು, ಸಲ್ಮಾನ್‌ನನ್ನು ಪ್ರಮುಖ ಶಂಕಿತ ಎಂದು ಗುರುತಿಸಲಾಗಿದೆ ಎಂದು ಹಿರಿಯ ಬದ್ಲಾಪುರ ಪೊಲೀಸ್ ಅಧಿಕಾರಿ ಗೋವಿಂದ್ ಪಾಟೀಲ್ ಹೇಳಿದ್ದಾರೆ.