ಯುವತಿ ಸ್ನಾನ ಮಾಡುವಾಗ ವಿಡಿಯೋ- ಅಪ್ರಾಪ್ತನ ಟ್ಯಾಬ್ ಪರಿಶೀಲಿಸಿದಾಗ ಬರೋಬ್ಬರಿ 3 ಸಾವಿರ ವಿಡಿಯೋ ಪತ್ತೆ

ಹೈದರಾಬಾದ್: 14 ವರ್ಷದ ಅಪ್ರಾಪ್ತನೊಬ್ಬ ಯುವತಿಯರು ಸ್ನಾನ ಮಾಡತ್ತಿರುವ ವಿಡಿಯೋ ಮಾಡಿ ಸಿಕ್ಕಿಬಿದ್ದ ಪ್ರಕರಣವೊಂದು ಮಂಗಳವಾರ ಆಂಧ್ರಪ್ರದೇಶದ ಮಾದಾಪುರದಲ್ಲಿ ನಡೆದಿದೆ.

ಅಪ್ರಾಪ್ತ ಬಾಲಕನ ಮನೆ ಲೇಡಿಸ್ ಹಾಸ್ಟೆಲ್ ಪಕ್ಕದಲ್ಲಿದ್ದು, ಅಲ್ಲಿ ಯುವತಿಯರು ಸ್ನಾನ ಮಾಡುವಾಗ ತನ್ನ ಟ್ಯಾಬ್‍ನಲ್ಲಿ ವಿಡಿಯೋ ಮಾಡುತ್ತಿದ್ದನು. ಮಂಗಳವಾರ ಬಾಲಕ ವಿಡಿಯೋ ಮಾಡುತ್ತಿದ್ದಾಗ ಯುವತಿ ಗಮನಿಸಿದ್ದಾರೆ. ಬಳಿಕ ಹಾಸ್ಟೆಲ್‍ನಲ್ಲಿದ್ದವರಿಗೆ ಈ ವಿಷಯ ತಿಳಿಸಿ ಬಾಲಕನ ಮನೆಗೆ ಹೋಗಿ ಆತನನ್ನು ರೆಡ್‍ಹ್ಯಾಂಡಾಗಿ ಹಿಡಿದಿದ್ದಾರೆ.

ಯುವತಿ ಬಾಲಕನನ್ನು ರೆಡ್‍ಹ್ಯಾಂಡಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು ಟ್ಯಾಬ್ ಪರಿಶೀಲಿಸಿದ್ದಾಗ ಅದರಲ್ಲಿ ಬರೋಬ್ಬರಿ 3 ಸಾವಿರ ಯುವತಿಯರು ಸ್ನಾನ ಮಾಡುತ್ತಿರುವ ವಿಡಿಯೋಗಳು ಹಾಗೂ ಫೋಟೋಗಳು ಪತ್ತೆಯಾಗಿದೆ.

ಬಾಲಕ 9ನೇ ತರಗತಿ ಓದುತ್ತಿದ್ದಾನೆ. ಮನೆಯ ಪಕ್ಕದಲ್ಲೇ ಹಾಸ್ಟೆಲ್‍ಯಿದ್ದು, ಬಾಲಕ ತನ್ನ ಮನೆಯ ಶೌಚಾಲಯದ ಕಿಟಕಿಯಿಂದ ಯುವತಿಯರ ಹಾಸ್ಟೆಲ್ ಶೌಚಾಲಯವನ್ನು ಇಣುಕಿ ನೋಡುತ್ತಿದ್ದನು. ಬಳಿಕ ತನ್ನ ಟ್ಯಾಬ್‍ನಲ್ಲಿ ಮಹಿಳೆಯರು ಸ್ನಾನ ಮಾಡುವ ವಿಡಿಯೋವನ್ನು ಸೆರೆ ಹಿಡಿಯುತ್ತಿದ್ದನು ಎಂದು ಮಾದಾಪುರ ಎಸಿಪಿ ಶ್ಯಾಮ್ ಪ್ರಸಾದ್ ರಾವ್ ತಿಳಿಸಿದ್ದಾರೆ.

ಬಾಲಕನ ಟ್ಯಾಪ್ ಪರಿಶೀಲಿಸಿದ್ದಾಗ ಬರೋಬ್ಬರಿ 3,000 ಫೋಟೋ ಹಾಗೂ ವಿಡಿಯೋ ಪತ್ತೆಯಾಗಿದೆ. ಬಾಲಕನ ಟ್ಯಾಬ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬಾಲಕನ ವಿರುದ್ಧ ಐಪಿಸಿ ಸೆಕ್ಷನ್ 354-ಸಿ(ಮಹಿಳೆಗೆ ಗೊತ್ತಿಲ್ಲದೆ ರಹಸ್ಯವಾಗಿ ಕ್ಯಾಮೆರಾದ ಮೂಲಕ ತೆಗೆಯುವುದು) ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದೇವೆ ಎಂದು ಮಾದಾಪುರ ಡಿಸಿಪಿ ಎ. ವೆಂಕಟೇಶ್ವರ ರಾವ್ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *