ಭದ್ರಾ ಡ್ಯಾಮ್‍ಗೆ ಕಾಲು ಜಾರಿ ಬಿದ್ದು ಬಾಲಕ ಸಾವು – ರಕ್ಷಣೆಗೆ ಹೋದ ವ್ಯಕ್ತಿ ನಾಪತ್ತೆ

ಶಿವಮೊಗ್ಗ: ಭದ್ರಾ ಜಲಾಶಯದ (Bhadra Dam) ಹಿನ್ನೀರಿಗೆ ತೆರಳಿದ್ದ ಬಾಲಕ ಕಾಲು ಜಾರಿ ಬಿದ್ದು ಸಾವಿಗೀಡಾದ ಘಟನೆ ಭದ್ರಾವತಿ (Bhadravathi) ತಾಲೂಕಿನ ಬಿಆರ್‌ಪಿ ಜಲಾಶಯದಲ್ಲಿ ನಡೆದಿದೆ.

ಬಾಲಕನ ಶವ ಪತ್ತೆಯಾಗಿದ್ದು, ಬಾಲಕನನ್ನು ರಕ್ಷಿಸಲು ಹೋಗಿದ್ದ ವ್ಯಕ್ತಿ ನಾಪತ್ತೆಯಾಗಿದ್ದಾನೆ. ರಜೆ ಇದ್ದಿದ್ದರಿಂದ ಜಲಾಶಯವನ್ನು ವೀಕ್ಷಿಸಲು ಕುಟುಂಬದೊಂದಿಗೆ ತೆರಳಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ. ಇದನ್ನೂ ಓದಿ: ನನ್ನ ಶತ್ರುಗಳು ಅಂದ್ರೆ ಅದು ನನ್ನ ಚಿಕ್ಕಮ್ಮ, ರಾಕೇಶ್ ಮಲ್ಲಿ – ಪೊಲೀಸರ ಮುಂದೆ ರಿಕ್ಕಿ ರೈ ಸ್ಫೋಟಕ ಹೇಳಿಕೆ

ಅಗ್ನಿಶಾಮಕ ದಳದ ಸಿಬ್ಬಂದಿ ನಡೆಸಿದ ಕಾರ್ಯಾಚರಣೆ ವೇಳೆ ಬಾಲಕನ ಮೃತದೇಹ ಪತ್ತೆಯಾಗಿದೆ. ಇನ್ನೂ ನಾಪತ್ತೆಯದ ವ್ಯಕ್ತಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: ಕ್ವಾರಿ ಹೊಂಡದ ನೀರಿನಲ್ಲಿ ಮುಳುಗಿ ಬಿಹಾರ ಮೂಲದ ಕಾರ್ಮಿಕ ಸಾವು