ಮಾರ್ಗಮಧ್ಯೆ ಆಂಬುಲೆನ್ಸ್ ಕೆಟ್ಟಿದ್ದೇ ಬಾಲಕನ ಸಾವಿಗೆ ಕಾರಣ- ಪೋಷಕರ ಆರೋಪ

ವಿಜಯಪುರ: ಹಾವು ಕಚ್ಚಿದ ಬಾಲಕನಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಘಟನೆ ವಿಜಯಪುರದಲ್ಲಿ ನಡೆದಿದೆ.

ಸಿಂದಗಿ ತಾಲ್ಲೂಕಿನ ಕೊಕಟನೂರ ಗ್ರಾಮದ ಗಣೇಶ ನಾಯ್ಕ ಎಂಬ ಬಾಲಕನಿಗೆ ಮನೆಯ ಹತ್ತಿರ ಆಟವಾಡುತ್ತಿದ್ದಾಗ ಹಾವು ಕಚ್ಚಿತ್ತು. ತಕ್ಷಣ ಗಣೇಶನನ್ನು ಸಿಂದಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ತಾಲೂಕು ಆಸ್ಪತ್ರೆಯಲ್ಲಿ ಔಷಧಿ ಇಲ್ಲದೇ ಪರದಾಡಬೇಕಾಯ್ತು. ಬಳಿಕ ಆಸ್ಪತ್ರೆಯ 108 ಆಂಬುಲೆನ್ಸ್ ವಾಹನದಲ್ಲಿ ಅಲಮೇಲ ಪಟ್ಟಣದ ಖಾಸಗಿ ಆಸ್ಪತ್ರೆಗೆ ರವಾನಿಸುವ ಮಾರ್ಗಮಧ್ಯೆ ವಾಹನ ಕೆಟ್ಟು ನಿಂತಿದೆ. ಈ ವೇಳೆ ಬಾಲಕ ಗಣೇಶ್ ಕೊನೆಯುಸಿರೆಳೆದಿದ್ದಾನೆ.

ಆಸ್ಪತ್ರೆ ಅವ್ಯವಸ್ಥೆಯಿಂದ ನಮ್ಮ ಮಗನ ಪ್ರಾಣ ಹೋಯ್ತು ಅಂತ ಇದೀಗ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ತಾಲೂಕು ವೈದ್ಯಾಧಿಕಾರಿ ಡಾ.ಇಂಗಳೆ ಆಸ್ಪತ್ರೆಯಲ್ಲಿ ಕೆಲ ವೈದ್ಯರ ಕೊರತೆ ಇದೆ.

ಹಾವು ಕಚ್ಚಿದ ಬಳಿಕ ತುಂಬಾ ತಡವಾಗಿ ಬಾಲಕನನ್ನು ಆಸ್ಪತ್ರೆಗೆ ಕರೆತಂದಿದ್ದರು. ಬಾಲಕನ ದೇಹಕ್ಕೆ ಆಗಲೇ ವಿಷ ಅಧಿಕ ಪ್ರಮಾಣ ಏರಿತ್ತು. ಹೀಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದೆವು. ಮಾರ್ಗಮಧ್ಯೆ ಆಂಬ್ಯುಲೆನ್ಸ್ ಕೆಟ್ಟಿದ್ದರ ಬಗ್ಗೆ ಮಾಹಿತಿ ಇಲ್ಲ ಅಂತ ಡಾ.ಇಂಗಳೆ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *