ಕ್ಯಾಂಪಸ್‍ನಲ್ಲಿ ಹುಡುಗ-ಹುಡುಗಿ ಒಟ್ಟಿಗೆ ಓಡಾಡುವಂತಿಲ್ಲ – ಚರ್ಚೆಗೆ ಗ್ರಾಸವಾಯ್ತು ವಿವಿ ಸುತ್ತೋಲೆ

ಇಸ್ಲಾಮಾಬಾದ್: ವಿಶ್ವವಿದ್ಯಾಲಯ, ಕಾಲೇಜುಗಳು ಶಿಸ್ತು ಕಾಪಾಡಲು ವಿವಿಧ ರೀತಿಯ ಸುತ್ತೋಲೆಗಳನ್ನು ಹೊರಡಿಸುತ್ತವೆ. ಆದರೆ ಪಾಕಿಸ್ತಾನದ ಖೈಬರ್-ಪಖ್ತುಂಕ್ವಾ ಪ್ರದೇಶದ ಚಾರ್ಸಡ್ಡದಲ್ಲಿರುವ ವಿಶ್ವವಿದ್ಯಾಲಯವೊಂದು ವಿಚಿತ್ರ ಸುತ್ತೋಲೆ ಹೊರಡಿಸುವ ಮೂಲಕ ಅಚ್ಚರಿ ಮೂಡಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬಚಾ ಖಾನ್ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ಚೀಫ್ ಪ್ರೊಕ್ಟರ್ ಫರ್ಮಾನುಲ್ಲಾಹೋನ್ ಸೆ.23ರಂದು ಈ ವಿಚಿತ್ರ ಸುತ್ತೋಲೆ ಹೊರಡಿಸಿದ್ದಾರೆ. ಇದರಲ್ಲಿ ಕಾಲೇಜ್ ಕ್ಯಾಂಪಸ್‍ನಲ್ಲಿ ಹುಡುಗ-ಹುಡುಗಿಯರು ಒಟ್ಟಿಗೆ ಸಂಚರಿಸುವುದನ್ನು ನಿಷೇಧಿಸಲಾಗಿದೆ. ವಿಶೇಷವಾಗಿ ಜೋಡಿಯಾಗಿ ಸಂಚರಿಸಕೂಡದು ಎಂದು ನೋಟಿಸ್‍ನಲ್ಲಿ ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ.

ಹುಡುಗ-ಹುಡುಗಿ ಒಟ್ಟಿಗೆ ಓಡಾಡುವುದು ‘ಇಸ್ಲಾಮಿಕ್ ಸಂಸ್ಕøತಿ’ಯಲ್ಲ ಹೀಗಾಗಿ ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಿಂದ ದೂರ ಇರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಕಾಲೇಜ್ ಕ್ಯಾಂಪಸ್‍ನಲ್ಲಿ ‘ಜೋಡಿ’ಯಾಗಿ ಓಡಾಡಿದರೆ ಭಾರೀ ಮೊತ್ತದ ದಂಡ ಹಾಗೂ ಪೋಷಕರಿಗೆ ದೂರು ನೀಡಲಾಗುವುದು ಎಂದು ವಿಶ್ವವಿದ್ಯಾಲಯ ಎಚ್ಚರಿಕೆ ನೀಡಿದೆ.

ವಿಶ್ವವಿದ್ಯಾಲಯದ ಆವರಣದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಅನಗತ್ಯ ಹಾಗೂ ಇಸ್ಲಾಮಿಕ್ ಸಂಸ್ಕøತಿಗೆ ವಿರುದ್ಧವಾಗಿರುವ ಇಂತಹ ಸಂಬಂಧಗಳಿಗೆ ಕಡಿವಾಣ ಹಾಕಬೇಕಿದೆ. ಹುಡುಗ ಮತ್ತು ಹುಡುಗಿ ಒಟ್ಟಾಗಿ ಓಡಾಡುವುದನ್ನು ವಿಶ್ವವಿದ್ಯಾಲಯ ಅನುಮತಿಸುವುದಿಲ್ಲ. ಕ್ಯಾಂಪಸ್‍ನಲ್ಲಿ ಹುಡುಗ ಹಾಗೂ ಹುಡುಗಿ ಜೋಡಿಯಾಗಿ ಕಂಡು ಬಂದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

https://twitter.com/Suliemankheil/status/1177182653038157824

ವಿದ್ಯಾರ್ಥಿಗಳು ಇದನ್ನು ಮುಂದುವರಿಸಿದಲ್ಲಿ ಪೋಷಕರನ್ನು ವಿಶ್ವವಿದ್ಯಾಲಯಕ್ಕೆ ಕರೆಸಲಾಗುವುದು ಹಾಗೂ ದಂಡ ವಿಧಿಸಲಾಗುವುದು. ಆದ್ದರಿಂದ ಅಹಿತಕರ ಘಟನೆಗಳು ನಡೆಯದಂತೆ ವಿದ್ಯಾರ್ಥಿಗಳು ವರ್ತಿಸಬೇಕು. ಹುಡುಗ ಹಾಗೂ ಹುಡುಗಿ ಇಬ್ಬರೂ ಒಟ್ಟಿಗೆ ಓಡಾಡಬಾರದು ಹಾಗೂ ಪತ್ರ ವ್ಯವಹಾರ ನಡೆಸಬಾರದು ಎಂದು ತಿಳಿಸಿದೆ.

ಟ್ವಟ್ಟರ್‍ನಲ್ಲಿ ಈ ಸುತ್ತೋಲೆ ವೈರಲ್ ಆಗಿದ್ದು, ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಕೆಲವರು ಟೀಕಿಸಿದರೆ, ಇನ್ನೂ ಕೆಲವರು ಸುತ್ತೋಲೆ ಪರ ವಾದ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *