ಹೆಲ್ಮೆಟ್ ಆಯ್ತು, ಈಗ ಬೌನ್ಸ್ ವಾಹನದಿಂದ ಕದಿಯುತ್ತಿದ್ದಾರೆ ಪೆಟ್ರೋಲ್

ಬೆಂಗಳೂರು: ಹೆಲ್ಮೆಟ್ ಕಳ್ಳರ ವಿರುದ್ಧ ಈಗಾಗಲೇ ಸಮರ ಸಾರಿರುವ ಬೌನ್ಸ್ ಕಂಪನಿಗೆ ಈಗ ಮತ್ತೊಂದು ತಲೆನೋವು ಎದುರಾಗಿದೆ. ನಗರದಲ್ಲಿ ಬೌನ್ಸ್ ವಾಹನದ ಪೆಟ್ರೋಲ್ ಕದಿಯೋ ಹೊಸ ತಂಡವೊಂದು ಈಗ ತಲೆ ಎತ್ತಿದೆ.

ಬೆಂಗಳೂರಿನ ಮಾರತಹಳ್ಳಿ ಬಳಿಯ ನಂದಗೋಕುಲ ಬಡಾವಣೆ ಸುತ್ತ ಮುತ್ತ ಹುಟ್ಟಿಕೊಂಡ ಖದೀಮರ ತಂಡ ಬೌನ್ಸ್ ವಾಹನವನ್ನು ತಳ್ಳಿಕೊಂಡು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಪೈಪ್ ಕಿತ್ತು ಪೆಟ್ರೋಲ್ ಕಳ್ಳತನ ಮಾಡುತ್ತಿದೆ.

ಖಾಲಿ ನೀರಿನ ಬಾಟಲ್ ಗಳಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಮತ್ತೊಂದು ಬೈಕಿನಲ್ಲಿ ಮೂವರು ಪರಾರಿಯಾಗಿದ್ದಾರೆ. ಅಕ್ಟೋಬರ್ 29ರ ಸಂಜೆ 5 ಗಂಟೆಗೆ ಈ ಕೃತ್ಯ ನಡೆದಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಬಗ್ಗೆ ಸ್ಥಳೀಯರಿಂದ ಸಿಸಿಟಿವಿ ದೃಶ್ಯ ಸಂಗ್ರಹಿಸಿರುವ ಬೌನ್ಸ್ ಬೈಕ್ ಕಂಪನಿ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದೆ.

ದೃಶ್ಯದಲ್ಲಿ ಏನಿದೆ?
ವಾಹನವನ್ನು ನಿರ್ಜನಕ್ಕೆ ಪ್ರದೇಶಕ್ಕೆ ಮೂವರು ತಂದಿದ್ದಾರೆ. ಇಬ್ಬರು ಒಂದು ಕಡೆಯಲ್ಲಿ ನಿಂತು ಜನರು ಬುತ್ತಿದ್ದಾರೋ ಇಲ್ಲವೋ ಎನ್ನುವುದನ್ನು ಗಮನಿಸುತ್ತಾರೆ. ಈ ವೇಳೆ ಓರ್ವ ಬೌನ್ಸ್ ವಾಹನದ ಪೆಟ್ರೋಲ್ ಪೈಪ್ ತೆಗೆದು ಖಾಲಿ ನೀರಿನ ಬಾಟಲಿಗೆ ತುಂಬಿಸಿದ್ದಾನೆ.

https://www.youtube.com/watch?v=76Gy6vVeBiA

Comments

Leave a Reply

Your email address will not be published. Required fields are marked *