ಕಾರಿನ ಎರಡೂ ಚಕ್ರ ಹರಿದರೂ ಮಗು ಬಚಾವ್ – ಕುತೂಹಲ ಹುಟ್ಟಿಸಿದೆ ವಂಡರ್ ಕಿಡ್

ಬೆಂಗಳೂರು: 14 ತಿಂಗಳ ಮಗುವಿನ ಮೇಲೆ ಕಾರು ಹರಿದ್ರೂ ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ಬೆಂಗಳೂರಿನ ಜೆಪಿ ನಗರದ 5ನೇ ಹಂತದಲ್ಲಿ ನಡೆದಿದೆ.

ಮೇ 18ರ ಗುರುವಾರ ಸಂಜೆ 4 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಮನೆಯ ವರಾಂಡದ ಮುಂದೆ ಆಟವಾಡುತ್ತಿದ್ದ ಇಬ್ಬರು ಮಕ್ಕಳಲ್ಲಿ ಹೆಣ್ಣು ಮಗುವಿನ ಮೇಲೆ ಕಾರು ಹರಿದಿದೆ. ಕಾರ್ ರಿವರ್ಸ್ ತೆಗೆಯುತ್ತಿದ್ದ ಚಾಲಕ ಎರಡೂ ಚಕ್ರಗಳನ್ನ ಮಗುವಿನ ಮೇಲೆ ಹರಿಸಿದ್ದಾನೆ.

ಆದ್ರೆ ಮಗು ಏನೂ ಆಗಿಲ್ಲ ಎಂಬಂತೆ ಪವಾಡ ಸದೃಶವಾಗಿ ಎದ್ದು ನಡೆದಾಡಿದೆ. ಈ ಘಟನೆ ನೆರೆದವರನ್ನು ಬೆಚ್ಚಿಬೀಳಿಸಿದೆ. ಈ ದೃಶ್ಯಾವಳಿಗಳು ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.

https://youtu.be/0H97E020P2g

 

Comments

Leave a Reply

Your email address will not be published. Required fields are marked *