ಸಿಡಿಎಸ್ ಹುದ್ದೆಗೆ ಕಾರ್ಯನಿರತ, ನಿವೃತ್ತ ಎರಡೂ ಅಧಿಕಾರಿಗಳ ಪರಿಗಣನೆ

ನವದೆಹಲಿ: ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಹುದ್ದೆಗೆ ಸೇವೆ ಸಲ್ಲಿರುತ್ತಿರುವ ಹಾಗೂ ನಿವೃತ್ತ ಎರಡೂ ವರ್ಗದ ಅಧಿಕಾರಿಗಳನ್ನು ಪರಿಗಣಿಸಬಹುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಭಾರತದ ಮೊದಲ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಮರಣದ 4 ತಿಂಗಳ ಬಳಿಕ ಸರ್ಕಾರ ಸೇವೆಯಲ್ಲಿರುವ ಹಾಗೂ ನಿವೃತ್ತ ಮಿಲಿಟರಿ ಅಧಿಕಾರಿಗಳನ್ನು ಈ ಹುದ್ದೆಗೆ ಪರಿಗಣಿಸಬಹುದು ಎಂದಿದೆ. ಇದನ್ನೂ ಓದಿ: 5 ಲಕ್ಷ ಅಲ್ಲ, 40 ಲಕ್ಷ ಭಾರತೀಯರು ಕೋವಿಡ್‌ನಿಂದ ಸಾವು: ಕೇಂದ್ರಕ್ಕೆ ರಾಹುಲ್‌ ತರಾಟೆ

ಈ ವಾರ ಮುಂದಿನ ಸೇನಾ ಮುಖ್ಯಸ್ಥರ ಕುರಿತು ಸರ್ಕಾರ ಘೋಷಣೆ ಮಾಡಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಹುದ್ದೆಗೆ ನೇಮಕಗೊಳ್ಳಲು ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ಅಧಿಕಾರಿಗಳನ್ನು ಪರಿಗಣಿಸಬಹುದು. ನೇಮಕಗೊಳ್ಳುವ ಅಧಿಕಾರಿಗಳು ಲೆಫ್ಟಿನೆಂಟ್ ಜನರಲ್ ಅಥವಾ ಸೇವಾ ಮುಖ್ಯಸ್ಥರ ಸಮಾನ ಶ್ರೇಣಿಯವರು ಇರಬಹುದು ಎಂದು ಮೂಲಗಳು ಮಾಹಿತಿ ನೀಡಿದೆ. ಇದನ್ನೂ ಓದಿ: ದೆಹಲಿಯಲ್ಲಿ ಹನುಮ ಜಯಂತಿ ವೇಳೆ ಹಿಂಸಾಚಾರ – ಯುಪಿಯಲ್ಲಿ ಕಟ್ಟೆಚ್ಚರ

ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಕಚೇರಿ ಮಿಲಿಟರಿ ರಚನೆ ಸುಧಾರಣೆಯಲ್ಲಿ ಅತಿ ದೊಡ್ಡ ಪಾತ್ರ ವಹಿಸುತ್ತದೆ. ಇದು ಸರ್ಕಾರ ಹಾಗೂ ರಕ್ಷಣಾ ಪಡೆಗಳ ನಡುವೆ ಸಮನ್ವಯದಿಂದ ಕೆಲಸ ಮಾಡಲು ಅನುಕೂಲವಾಗಿಸುತ್ತದೆ.

Comments

Leave a Reply

Your email address will not be published. Required fields are marked *