ಸಚಿವ ಸ್ಥಾನ ಉಳಿಸಿಕೊಳ್ಳಲು 1 ತಿಂಗಳ ಮೊದಲೇ ರಿಪೋರ್ಟ್‌ ಕಾರ್ಡ್‌ ಸಲ್ಲಿಸಿದ ಬೋಸರಾಜು

ಮಡಿಕೇರಿ: ಸಂಪುಟ ಪುನಾರಚನೆ ಕುರಿತು ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಸಚಿವ ಸ್ಥಾನ ಉಳಿಸಿಕೊಳ್ಳಲು ಎನ್.‌ಎಸ್‌ ಬೋಸರಾಜು (NS Bosaraju) ಮುಂದಾಗಿದ್ದಾರೆ. ರಾಜ್ಯದಲ್ಲಿ ಸಚಿವರ ಕಾರ್ಯವೈಖರಿಯ ಬಗ್ಗೆ ಹೈಕಮಾಂಡ್‌ ರಿಪೋರ್ಟ್‌ ಕಾರ್ಡ್‌ (Report Card) ಕೇಳಿದ ಹಿನ್ನೆಲೆ ಒಂದು ತಿಂಗಳಿಗೂ ಮೊದಲೇ ಸಲ್ಲಿಸಿದ್ದಾರೆ.

ಈ ಕುರಿತು ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಮಾತನಾಡಿರುವ ಸಚಿವರು, ನನ್ನ ಕೆಲಸದ ಬಗ್ಗೆ ಹೈಕಮಾಂಡ್‌ಗೆ ರಿಪೋರ್ಟ್ ಕಾಡ್೯ ಸಲ್ಲಿಸಿದೇನೆ. ನನ್ನ ಇಲಾಖೆ ವ್ಯಾಪ್ತಿಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನದ ಕೆಲಸ, ಪಕ್ಷ ಸಂಘಟನೆ ಹಾಗೂ ಜಿಲ್ಲಾವಾರು ಭೇಟಿ ಸೇರಿದಂತೆ ಹಲವಾರು ಪ್ರಶ್ನೆಗಳನ್ನು ಹೈಕಮಾಂಡ್ ಕೇಳಿತ್ತು. ಸಮಗ್ರವಾಗಿ ಉತ್ತರಿಸಿ ಕಾರ್ಡ್‌ ಕಳಿಸಿದ್ದೇನೆ. ಇಡೀ ರಾಜ್ಯದಲ್ಲಿ ನೀವೆ ಮೊದಲು ಕಳುಹಿಸಿದ್ದು, ಅಂತ ಹೈಕಮಾಂಡ್‌ ಹೇಳಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಾಕತ್ತಿದ್ರೆ ಯತ್ನಾಳ್‌ನ ಉಚ್ಚಾಟಿಸಿ – ವಿಜಯೇಂದ್ರಗೆ ಸಚಿವ ಪ್ರಿಯಾಂಕ್‌ ಖರ್ಗೆ ಸವಾಲ್‌

ನನ್ನಂತೆ ಎಲ್ಲ ಸಚಿವರ ರಿಪೋರ್ಟ್‌ ಕಾರ್ಡನ್ನು ಹೈಕಮಾಂಡ್‌ ಕೇಳಿದೆ. ಮುಂದೆ ಹೈಕಮಾಂಡ್‌ ನಿರ್ಧಾರಕ್ಕೆ ಅನುಗುಣವಾಗಿ ಸಚಿವ ಸಂಪುಟ ವಿಸ್ತರಣೆಯಾಗುತ್ತೆ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧವಾಗಿ ನಾವು ನಡೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 93 ವರ್ಷದ ಅಜ್ಜಿಗೆ ಪರೋಲ್ – ಜೈಲಲ್ಲಿ ಅಜ್ಜಿಯ ಪರಿಸ್ಥಿತಿ ಕಂಡು ಮರುಗಿದ್ದ ಉಪಲೋಕಾಯುಕ್ತ