ಬೋರಿಸ್ ಜಾನ್ಸನ್, ರಿಷಿ ಸುನಾಕ್‌ ಸೇರಿದಂತೆ 13 ಬ್ರಿಟಿಷ್‌ ರಾಜಕಾರಣಿಗಳಿಗೆ ರಷ್ಯಾ ಪ್ರವೇಶ ನಿಷೇಧ

ಮಾಸ್ಕೋ: ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್, ರಿಷಿ ಸುನಾಕ್‌ ಸೇರಿದಂತೆ ಒಟ್ಟು 13 ಬ್ರಿಟಷ್ ಉನ್ನತ ಮಂತ್ರಿಗಳ ಪ್ರವೇಶಕ್ಕೆ ರಷ್ಯಾ ನಿಷೇಧ ಹೇರಿದೆ.

ರಷ್ಯಾ ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧವನ್ನು ಬ್ರಿಟನ್ ವಿರೋಧಿಸಿದ್ದು, ಈ ಹಿನ್ನೆಲೆಯಲ್ಲಿ ಬೋರಿಸ್ ಜಾನ್ಸನ್ ಹಾಗೂ ಇತರ ಮಂತ್ರಿಗಳು ರಷ್ಯಾ ಪ್ರವೇಶಿಸದಂತೆ ಶನಿವಾರ ನಿಷೇಧ ಹೇರಿದೆ. ಇದನ್ನೂ ಓದಿ: ಇಮ್ರಾನ್ ಖಾನ್ ಆರೋಪವನ್ನು ತಳ್ಳಿ ಹಾಕಿದ ಪಾಕ್ ಸೇನೆ

ರಷ್ಯಾ ಬೋರಿಸ್ ಜಾನ್ಸನ್‌ರೊಂದಿಗೆ ಭಾರತೀಯ ಮೂಲದ ಮಂತ್ರಿಗಳಾದ ರಿಷಿ ಸುನಾಕ್, ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಮತ್ತು ಅಟಾರ್ನಿ ಜನರಲ್ ಸುಯೆಲ್ಲಾ ಬ್ರೆವರ್ಮನ್‌ಗೆ ರಷ್ಯಾ ನಿಷೇಧ ಹೇರಿದೆ. ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್, ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್, ಕನ್ಸರ್ವೇಟಿವ್ ಸಂಸದ ಹಾಗೂ ಮಾಜಿ ಬ್ರಿಟಿಷ್ ಪ್ರಧಾನಿ ಥೆರೆಸಾ ಮೇ ಹೀಗೆ ಒಟ್ಟು 13 ಮಂತ್ರಿಗಳು ಮುಖ್ಯವಾಗಿ ಕ್ಯಾಬಿನೆಟ್ ಸದಸ್ಯರು ರಷ್ಯಾ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.

ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದ ಬಳಿಕ ಬ್ರಿಟನ್ ರಷ್ಯಾ ವಿರುದ್ಧ ನಿರ್ಬಂಧಗಳನ್ನು ಹೇರಿತ್ತು. ಇದಕ್ಕೆ ಪ್ರತಿಕಾರವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ರಷ್ಯಾ ತಿಳಿಸಿದೆ. ಇದನ್ನೂ ಓದಿ: ಜೆರುಸಲೇಮ್ ಮಸೀದಿಯಲ್ಲಿ ಹಿಂಸಾಚಾರ – 150ಕ್ಕೂ ಹೆಚ್ಚು ಮಂದಿಗೆ ಗಾಯ

ಯುದ್ಧ ಪ್ರಾರಂಭವಾದ ಬಳಿಕ ಮಾರ್ಚ್‌ನಲ್ಲಿ ರಷ್ಯಾ ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿರುದ್ಧವೂ ಇದೇ ರೀತಿಯ ನಿಷೇಧವನ್ನು ವಿಧಿಸಿತ್ತು. ವಾರದ ಆರಂಭದಲ್ಲಿ ಬ್ರಿಟನ್ ಹಾಗೂ ಅಮೆರಿಕ ಎರಡೂ ಮಾಸ್ಕೋ ಮೇಲೆ ಆರ್ಥಿಕತೆಯನ್ನು ಹಾನಿಮಾಡುವಂತಹ ಮತ್ತಷ್ಟು ನಿರ್ಬಂಧಗಳನ್ನು ವಿಧಿಸಿದ್ದವು.

Comments

Leave a Reply

Your email address will not be published. Required fields are marked *