ರಣ್‌ಬೀರ್ -ಆಲಿಯಾ ರಿಸೆಪ್ಷನ್‌ಗೆ ಬಚ್ಚನ್ ಕುಟುಂಬಕ್ಕೆ ಆಹ್ವಾನವಿರಲಿಲ್ಲವೇಕೆ?

ಬಾಲಿವುಡ್ ಗಲ್ಲಿ ಗಲ್ಲಿಯಲ್ಲೂ ಈಗ ಒಂದೇ ಸುದ್ದಿ, ರಣ್‌ಬೀರ್ ಆಲಿಯಾ ಮದುವೆ ವಿಚಾರ. ಏಪ್ರಿಲ್ 14ಕ್ಕೆ ರಣ್‌ಬೀರ್ ಮತ್ತು ಆಲಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಇಬ್ಬರು ಸ್ಟಾರ್‌ಗಳು ಮದುವೆಯ ಬಳಿಕ ಒಪ್ಪಿಕೊಂಡಿದ್ದ ಚಿತ್ರಗಳತ್ತ ಬ್ಯುಸಿಯಾಗಿದ್ದಾರೆ. ಆದರೆ ಈಗ ಬಿಟೌನ್‌ನಲ್ಲಿ ಹೊಸ ವಿಚಾರವೊಂದು ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ರಣ್‌ಬೀರ್ ಮತ್ತು ಆಲಿಯಾ ರಿಸೆಪ್ಷನ್‌ನಲ್ಲಿ ಬಚ್ಚನ್ ಕುಟುಂಬಕ್ಕೆ ಯಾಕೆ ಆಹ್ವಾನವಿರಲಿಲ್ಲ ಅಂತಾ ಭಾರೀ ಚರ್ಚೆ ಆಗುತ್ತಿದೆ.

ರಣ್‌ಬೀರ್ ಮತ್ತು ಆಲಿಯಾ ಪ್ರೀತಿಸಿ, ಹಿರಿಯರ ಸಮ್ಮತಿಯ ಮೇರೆಗೆ ಕಳೆದ ವಾರವಷ್ಟೇ ಹಸೆಮಣೆ ಏರಿದ್ದರು. ಮದುವೆಯಲ್ಲಿ ಕುಟುಂಬಸ್ಥರು ಆಪ್ತರಿಗಷ್ಟೇ ಆಹ್ವಾನವಿತ್ತು. ನಂತರ ಏಪ್ರಿಲ್ 16ರಂದು ನಡೆದ ರಿಸೆಪಕ್ಷನ್‌ನಲ್ಲಿ ಹಿಂದಿ ಚಿತ್ರರಂಗದ ಗಣ್ಯರಿಗೆ, ಸೆಲೆಬ್ರೆಟಿಗಳಿಗೆ ಆಹ್ವಾನ ನೀಡಲಾಗಿತ್ತು. ಆದರೆ ಬಚ್ಚನ್ ಕುಟುಂಬಕ್ಕೆಯೇಕೆ ಆಹ್ವಾನವಿರಲಿಲ್ಲ. ಬಿಗ್‌ಬಿ ಮಗಳು ಶ್ವೇತಾ ಬಚ್ಚನ್ ರಣ್‌ಬೀರ್ ಕಪೂರ್ ಅವರ ಸಂಬಂಧಿಯಾಗಿದ್ದು, ಅವರಿಗೆ ಇನ್‌ವೈಟ್ ಮಾಡಿದ್ದರೆ, ಉಳಿದ ಕುಟುಂಬದ ಸದಸ್ಯರಿಗೆ ಕರೆಯದೇ ಇರೋದು ಅಚ್ಚರಿ ಮೂಡಿಸಿದೆ.

ಬಚ್ಚನ್ ಕುಟುಂಬಕ್ಕೆ ಕರೆಯದೇ ಇರುವುದು ಅಚ್ಚರಿ ಮೂಡಿಸಿದ್ದರೆ, ಇನ್ನೊಂದ್ ಕಡೆ `ಸಾವರಿಯಾ’ ಚಿತ್ರದ ಮೂಲಕ ರಣ್‌ಬೀರ್‌ ಕಪೂರ್ ಜರ್ನಿ ಶುರು ಮಾಡಿದ್ದರು. ಈ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಕೂಡ ರಿಸೆಪ್ಷನ್‌ನಲ್ಲಿ ಗೈರಾಗಿದ್ದರು. ಇತ್ತೀಚಿಗೆ ನಟಿ ಆಲಿಯಾ ಕೂಡ `ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದಲ್ಲಿ ನಟಿಸಿದ್ದರು. ಇದನ್ನೂ ಓದಿ:ಪಟಾಕ ಪೋರಿ ನಭಾ ಮಸ್ತ್ ಮಸ್ತ್ ಫೋಟೋಶೂಟ್

ಒಟ್ನಲ್ಲಿ ಅಮಿತಾಭ್‌ ಬಚ್ಚನ್ ಕುಟುಂಬ ಮತ್ತು ನಿರ್ದೇಶಕ ಬನ್ಸಾಲಿ ಅವರಿಗೆ ರಣ್‌ಬೀರ್ ಮತ್ತು ಆಲಿಯಾ ರಿಸೆಪಕ್ಷನ್‌ಗೆ ಆಹ್ವಾನ ಇಲ್ಲದೇ ಇರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇವರಿಬ್ಬರ ನಡುವಿನ ಸ್ನೇಹ ಸಂಬಂಧದ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ.‌

Comments

Leave a Reply

Your email address will not be published. Required fields are marked *