KGF-2 ಟ್ರೈಲರ್ ರಿಲೀಸ್‌ಗೆ ಬೆಂಗ್ಳೂರಿಗೆ ಬಂದಿಳಿದ ಬಾಲಿವುಡ್ ಬ್ಯಾಡ್ ಬಾಯ್ ಸಂಜಯ್ ದತ್

ಇಂದು ಸಂಜೆ  6.40ಕ್ಕೆ ಕೆಜಿಎಫ್ 2 ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದೆ. ಈ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಬೆಂಗಳೂರಿಗೆ ಬಂದಿಳಿದ್ದಾರೆ. ಪ್ರತಿಷ್ಠಿತ ಹೊಟೇಲ್ ವೊಂದರಲ್ಲಿ ತಂಗಿರುವ ಅವರನ್ನು ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ಚಿತ್ರತಂಡ ಭೇಟಿ ಮಾಡಿದೆ. ಇದನ್ನೂ ಓದಿ : ಕೆಜಿಎಫ್ 2 ಟ್ರೈಲರ್ ಮೊದಲ ವಿಮರ್ಶೆ : ಹೇಗಿದೆ ರಾಕಿಭಾಯ್ KGF 2 ಹವಾ

ಕೆಜಿಎಫ್ 2 ಸಿನಿಮಾದ ಟ್ರೈಲರ್ ಇಂದು ಸಂಜೆ 6.40ಕ್ಕೆ ಯಶ್ ನಟನೆಯ ಕೆಜಿಎಫ್ 2 ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದೆ. ಐದು ಭಾಷೆಗಳಲ್ಲಿ  ಸಿನಿಮಾ ಬಿಡುಗಡೆ ಆಗುತ್ತಿದ್ದು, ಹಾಗಾಗಿ ಐದು ಭಾಷೆಯಲ್ಲೂ ಏಕಕಾಲಕ್ಕೆ ಟ್ರೈಲರ್ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಇದನ್ನೂ ಓದಿ : ಕಾಂಗ್ರೆಸ್ ಅವಧಿಯಲ್ಲಿ ನಡೆದ ಭಯೋತ್ಪಾದನೆ ತಿಳಿಯಲು ‘ದಿ ಕಾಶ್ಮೀರ್ ಫೈಲ್ಸ್’ ನೋಡಿ: ಅಮಿತ್ ಶಾ

ತೆಲುಗಿನ ಖ್ಯಾತ ನಟ ರಾಮ್ ಚರಣ್ ತೇಜ ಕೆಜಿಎಫ್‍ 2 ತೆಲುಗು ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದರೆ, ತಮಿಳಿನ ಖ್ಯಾತ ನಟ ಸೂರ್ಯ ಕೆಜಿಎಫ್ 2 ತಮಿಳು ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ. ಕೆಜಿಎಫ್ 2 ಮಲಯಾಳಂ ಟ್ರೈರಲ್ ಅನ್ನು ಅಲ್ಲಿನ ಖ್ಯಾತ ನಟ ಪೃಥ್ವಿರಾಜ್ ರಿಲೀಸ್ ಮಾಡಲಿದ್ದಾರೆ ಎಂದು ಹೊಂಬಾಳೆ ಫಿಲ್ಮ್ ಹೇಳಿದೆ.  ಈ ಟ್ರೈಲರ್ ರಿಲೀಸ್ ಅನ್ನು ವಿಶೇಷ ರೀತಿಯಲ್ಲಿ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದ್ದು, ಯಶ್ ಅಭಿಮಾನಿಗಳು ರಾಜ್ಯದ ನಾನಾ ಕಡೆ ಹಬ್ಬದಂತೆ ಆಚರಿಸುತ್ತಿದ್ದಾರೆ. ಇದನ್ನು ಓದಿ : ಚಂದನವನ ವಿಮರ್ಶಕರ ಪ್ರಶಸ್ತಿ: ರಾಜ್ ಬಿ ಶೆಟ್ಟಿ ಅತ್ಯುತ್ತಮ ನಟ, ಗಾನವಿ ಲಕ್ಷ್ಮಣ್ ನಟಿ, ಉಳಿದ ಪ್ರಶಸ್ತಿ ವಿವರ

ಹಾಗೆಯೇ ಹಿಂದಿಯಲ್ಲೂ ಈ ಟ್ರೈಲರ್ ಬಿಡುಗಡೆ ಆಗುತ್ತಿದ್ದು, ಅದನ್ನು ಬಾಲಿವುಡ್ ಖ್ಯಾತ ನಟ ಫರಾನ್ ಅಖ್ತರ್ ರಿಲೀಸ್ ಮಾಡುತ್ತಿದ್ದಾರೆ. ಈಗಾಗಲೇ ನಾಲ್ಕು ಟ್ರೈಲರ್ ಗಳನ್ನು ಯಾರೆಲ್ಲ ರಿಲೀಸ್ ಮಾಡಲಿದ್ದಾರೆ ಎನ್ನುವ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಕನ್ನಡದ ಟ್ರೈಲರ್ ರಿಲೀಸ್ ಯಾರು ಮಾಡಲಿದ್ದಾರೆ ಎನ್ನುವ ಮಾಹಿತಿಯನ್ನು ಇನ್ನೂ ಹಂಚಿಕೊಂಡಿಲ್ಲ. ಇವತ್ತು ಟ್ರೈಲರ್ ಬಿಡುಗಡೆಯ ಮುಖ್ಯ ಅತಿಥಿಗಳಾಗಿ ಶಿವರಾಜ್ ಕುಮಾರ್ ಮತ್ತು ಸಚಿವ ಅಶ್ವತ್ಥ್ ನಾರಾಯಣ ಭಾಗಿ ಆಗುತ್ತಿರುವುದರಿಂದ ಇವರೇ ಬಹುಶಃ ಟ್ರೈಲರ್ ಬಿಡುಗಡೆ ಮಾಡಬಹುದು ಎನ್ನಲಾಗುತ್ತಿದೆ.

Comments

Leave a Reply

Your email address will not be published. Required fields are marked *