ಪ್ಯಾಂಟ್ ಧರಿಸದ್ದಕ್ಕೆ ಬಾಲಿವುಡ್ ನಟಿಯ ತಂಗಿಯನ್ನು ಹೊರಹಾಕಿದ ರೆಸ್ಟೋರೆಂಟ್ ಸಿಬ್ಬಂದಿ- ವಿಡಿಯೋ ವೈರಲ್

ಮುಂಬೈ: ಬಾಲಿವುಡ್ ನಟಿ ಯಾಮಿ ಗೌತಮ್ ತಂಗಿ ಸುರೀಲಿ ಗೌತಮ್ ಪ್ಯಾಂಟ್ ಧರಿಸಲಿಲ್ಲ ಎಂದು ರೆಸ್ಟೋರೆಂಟ್ ಸಿಬ್ಬಂದಿ ಆಕೆಯನ್ನು ಹೊರಗೆ ಹಾಕಿದ ಘಟನೆ ಸರ್ಬಿಯಾದಲ್ಲಿ ನಡೆದಿದೆ.

ಸುರೀಲಿ ತನ್ನ ಸಹೋದರಿ ಯಾಮಿ ಜೊತೆ ಸರ್ಬಿಯಾಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ರೆಸ್ಟೋರೆಂಟ್ ಗೆ ಹೋಗಿದ್ದಾಗ ಅಲ್ಲಿನ ಸಿಬ್ಬಂದಿ ಸುರೀಲಿ ಅವರಿಗೆ ಪ್ರವೇಶ ನಿರಾಕರಿಸಿದ್ದಾರೆ.

ನಟಿ ಯಾಮಿ ಗೌತಮ್ ತನ್ನ ಸಹೋದರಿಯನ್ನು ಯಾಕೆ ರೆಸ್ಟೋರೆಂಟ್‍ನಿಂದ ಹೊರ ಹಾಕಿದ್ದಾರೆ ಎಂದು ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಮಾಡುವ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ.

ಯಾಮಿ ತನ್ನ ಸಹೋದರಿಯನ್ನು, ಮೊದಲೇ ಮಾತನಾಡಿಕೊಂಡಂತೆ ನೀನು ರೆಸ್ಟೋರೆಂಟ್‍ನಲ್ಲಿ ಏಕೆ ಇಲ್ಲ. ನೀನು ಈ ಬಾರಿನಲ್ಲಿ ಏನು ಮಾಡುತ್ತಿದ್ದೀಯಾ? ಎಂದು ಪ್ರಶ್ನಿಸಿದ್ದಾರೆ. ಆಗ ಸುರೀಲಿ ನಾನು ಪ್ಯಾಂಟ್ ಧರಿಸಿಲ್ಲ ಎಂದು ಉತ್ತರಿಸಿದ್ದಾರೆ. ನೀನು ಪ್ಯಾಂಟ್ ಧರಿಸಿದ ಕಾರಣ ರೆಸ್ಟೋರೆಂಟ್ ಸಿಬ್ಬಂದಿ ನಿನ್ನನ್ನು ಹೊರಹಾಕಿದ್ದಾರಾ” ಎಂದು ಯಾಮಿ ಹಾಸ್ಯ ಮಾಡಿದ್ದಾರೆ.

ಸದ್ಯ ಯಾಮಿ ಗೌತಮ್ ಸಹೋದರಿ ಸುರೀಲಿ ಗೌತಮ್ ‘ಬ್ಯಾಟಲ್ ಆಫ್ ಸಾರಾಗರಿ’ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರವನ್ನು ರಾಜ್‍ಕುಮಾರ್ ಸಂತೋಷಿ ನಿರ್ದೇಶನ ಮಾಡುತ್ತಿದ್ದಾರೆ.

ನನ್ನ ತಂಗಿಯ ಮೊದಲ ಸಿನಿಮಾಕ್ಕಾಗಿ ನಾನು ತುಂಬಾ ಉತ್ಸಾಹದಲ್ಲಿದ್ದೇನೆ. ಆಕೆಯ ಮೊದಲ ಸಿನಿಮಾವನ್ನು ನಿರ್ದೇಶಕ ರಾಜ್‍ಕುಮಾರ್ ಸಂತೋಷಿ ನಿರ್ದೇಶಿಸುತ್ತಿದ್ದಾರೆ ಎಂದು ಯಾಮಿ ಗೌತಮ್ ಹೇಳಿಕೊಂಡಿದ್ದರು.

Comments

Leave a Reply

Your email address will not be published. Required fields are marked *