ಮುಂಬೈ: ಬಾಲಿವುಡ್ ಧಕ್ ಧಕ್ ಗರ್ಲ್ ಮಾಧುರಿ ದೀಕ್ಷಿತ್ ಅವರ ಅಪೂರ್ವ ಸೌಂದರ್ಯ 18ರ ಯುವತಿಯರನ್ನು ನಾಚಿಸುವಂತಿದೆ. 52 ವರ್ಷದ ಮಾಧುರಿ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಹಳೆಯ ಫೋಟೋ ನೋಡುಗರ ಹಾರ್ಟ್ ಬೀಟ್ ಹೆಚ್ಚು ಮಾಡಿದೆ.
ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಂನಲ್ಲಿ ತಮ್ಮ ಹಳೆಯ ಸಿನಿಮಾದ ಫೋಟೋವನ್ನು ಅಭಿಮಾನಿಗಳೊಂದಿಗೆ ಮಾಧುರಿ ದೀಕ್ಷಿತ್ ಹಂಚಿಕೊಂಡಿದ್ದಾರೆ. ಫೋಟೋಗೆ ಕಣ್ಣುಗಳು ಸೇರಿದಾಗ ಹೃದಯ ಬಡಿತ ಹೆಚ್ಚಾಗುತ್ತೆ ಎಂಬ ಹಿಂದಿ ಸಾಲುಗಳನ್ನು ಬರೆದುಕೊಂಡಿದ್ದಾರೆ.
Nazrein mili dil dhadka pic.twitter.com/cAE0z8cbqa
— Madhuri Dixit Nene (@MadhuriDixit) January 14, 2020
ಸದ್ಯ ಖಾಸಗಿ ವಾಹಿನಿಯ ಡ್ಯಾನ್ಸಿಂಗ್ ರಿಯಾಲಿಟಿ ಶೋದ ತೀರ್ಪುಗಾರರಾಗಿ ಮಾಧುರಿ ಕಾಣಿಸಿಕೊಳ್ಳುತ್ತಿದ್ದಾರೆ. 2019ರಲ್ಲಿ ಬಿಡುಗಡೆಯಾಗಿದ್ದ ‘ಕಳಂಕ್’ ಸಿನಿಮಾದಲ್ಲಿ ಸಂಜಯ್ ದತ್ ಗೆ ಜೋಡಿಯಾಗಿ ಮಾಧುರಿ ಕಾಣಿಸಿಕೊಂಡಿದ್ದರು. ಬಹುತೇಕರು ಮಾಧುರಿಗಾಗಿಯೇ ‘ಕಳಂಕ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ತೆರಳಿದ್ದು ಮಾತ್ರ ಸುಳ್ಳಲ್ಲ.

Leave a Reply