ಲಾಕ್‍ಡೌನ್ ಅವಧಿಯಲ್ಲಿ 5 ಕೆಜಿ ತೂಕ ಇಳಿಸಿದ ಕಂಗನಾ

ಶಿಮ್ಲಾ: ಕೊರೊನಾ ವೈರಸ್ ಭೀತಿಯಿಂದಾಗಿ ದೇಶಾದ್ಯಂತ ಏಪ್ರಿಲ್ 14ರವರೆಗೂ ಲಾಕ್‍ಡೌನ್ ಘೋಷಿಸಲಾಗಿದೆ. ಹೀಗಾಗಿ ಸಿನಿಮಾ, ಕಿರುತೆರೆ ನಟ, ನಟಿಯರು ಸೇರಿಂದರೆ ಕ್ರೀಡಾಪಟುಗಳು ಮನೆಯಲ್ಲೇ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇದೇ ಸಮಯದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಹಾರ್ಡ್ ವರ್ಕೌಟ್ ಮೂಲಕ 5 ಕೆಜಿ ತೂಕ ಇಳಿಸಿದ್ದಾರೆ.

33 ವರ್ಷದ ಕಂಗನಾ ರಣಾವತ್ ಸದ್ಯ ಕುಟುಂಬದೊಂದಿಗೆ ಮನಾಲಿಯಲ್ಲಿದ್ದಾರೆ. ಲಾಕ್‍ಡೌನ್‍ನಲ್ಲಿ ತಮ್ಮ ಕುಟುಂಬಕ್ಕೆ ಸಮಯವನ್ನು ನೀಡುವುದರ ಜೊತೆಗೆ, ಫಿಟ್‍ನೆಸ್‍ನ ಬಗ್ಗೆಯೂ ಅವರು ವಿಶೇಷ ಗಮನ ಹರಿಸುತ್ತಿದ್ದಾರೆ. ಲಾಕ್‍ಡೌನ್ ಅವಧಿಯಲ್ಲಿ ಕಂಗನಾ ಅವರು 5 ಕೆಜಿ ತೂಕವನ್ನು ಇಳಿಸಿದ್ದಾರೆ. ತೂಕ ಇಳಿಸಿಕೊಳ್ಳಲು ಕಂಗನಾ ತಮ್ಮ ಟ್ರೇನರ್ ಸಹಾಯದಿಂದ ಮನೆಯಲ್ಲಿ ಹಾರ್ಡ್ ವರ್ಕೌಟ್ ಮಾಡುತ್ತಿದ್ದಾರೆ.

https://www.instagram.com/p/B-wvGjClR9v/

ಟೀಂ ಕಂಗನಾ ರಣಾವತ್ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಕಂಗನಾ ಅವರ ಫಿಟ್ನೆಸ್ ತರಬೇತಿಯ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಜೊತೆಗೆ ‘ಕಂಗನಾ ಅವರಿಂದ ಸ್ಫೂರ್ತಿ ಪಡೆಯಿರಿ, ಪ್ರೇರೇಪಿತವಾಗಿರಿ. ಸೋಮಾರಿತನವು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ’ ಎಂದು ಬರೆಯಲಾಗಿದೆ.

ಕಂಗನಾ ರಣಾವತ್ ಅವರು ‘ಧಾಕಡ್’ ಎಂಬ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸಲು ಸಿದ್ಧತೆ ನಡೆಸಿದ್ದಾರೆ. ಧಾಕಡ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿರುವ ಕಂಗನಾ 20 ಕೆಜಿ ತೂ ಇಳಿಸಬೇಕಾಗಿದೆ. ಕಂಗನಾ ಅವರು ಹಿಂದಿನ ವಿಡಿಯೋದಲ್ಲಿ ತಾನು 52 ಕೆಜಿ ತೂಕ ಇರುವುದಾಗಿ ಹೇಳಿದ್ದರು. ಆದರೆ ಈಗ ಅವರ ತೂಕ 70 ಕೆಜಿ ತಲುಪಿದ್ದು, ಅದನ್ನು ಕಡಿಮೆ ಮಾಡಿಕೊಳ್ಳಲು ಹಾರ್ಡ್ ವರ್ಕೌಟ್ ನಡೆಸಿದ್ದಾರೆ.

https://www.instagram.com/p/B9UJvsLB3lZ/

ಕಂಗನಾ ಅವರು ‘ತಲೈವಿ’ ಚಿತ್ರದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಪಾತ್ರ ನಿರ್ವವಹಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಈಗ ಕಂಗನಾ ತಮ್ಮ ಮುಂದಿನ ಚಿತ್ರ ‘ಧಾಕಡ್’ ಚಿತ್ರಕ್ಕಾಗಿ ತೂಕ ಇಳಿಸಿಕೊಳ್ಳುತ್ತಿದ್ದಾರೆ.

‘ಧಾಕಡ್’ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಇದನ್ನು ಎಡ್ ಮೇಕರ್ ರಜನೀಶ್ ಘಾಯ್ ನಿರ್ದೇಶಿಸಲಿದ್ದಾರೆ. ಈ ಸಿನಿಮಾ ಇದೇ ವರ್ಷ ದೀಪಾವಳಿಯಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಈ ಹಿಂದೆ ತಿಳಿಸಿತ್ತು.

Comments

Leave a Reply

Your email address will not be published. Required fields are marked *