ಎಲಾನ್ ಮಸ್ಕ್ ತಾಯಿಯೊಂದಿಗೆ ಮುಂಬೈನ ಸಿದ್ಧಿವಿನಾಯಕ ದೇಗುಲಕ್ಕೆ ಜಾಕ್ವೆಲಿನ್ ಭೇಟಿ

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಎಲಾನ್ ಮಸ್ಕ್ (Elon Musk) ತಾಯಿ ಮಾಯೆ ಮಸ್ಕ್ (Maye Musk) ಜೊತೆ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಮುಂಬೈನ ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ಪ್ರಣಿತಾ ಮಗನ ನಾಮಕರಣದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

ಏ.20ರಂದು ಮಾಯೆ ಮಾಸ್ಕ್ ಅವರೊಂದಿಗೆ ನಟಿ ಜಾಕ್ವೆಲಿನ್ (Jacqueline Fernandez) ಮುಂಬೈನ ಸಿದ್ಧಿವಿನಾಯಕ ದೇವಾಲಯಕ್ಕೆ (Siddhi Vinayak Temple) ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ನಟಿ ಗೋಲ್ಡನ್ ಬಣ್ಣದ ಬಟ್ಟೆಯಲ್ಲಿ ಮಿಂಚಿದ್ರೆ, ಹಳದಿ ಬಣ್ಣದ ಉಡುಗೆಯನ್ನು ಎಲಾನ್ ಮಸ್ಕ್ ತಾಯಿ ಧರಿಸಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶ ಸಿಎಂ ಭೇಟಿಯಾದ ರಾಕಿಂಗ್ ಸ್ಟಾರ್ ಯಶ್

ತಮ್ಮ ಬರವಣಿಗೆಯ ʻಎ ವುಮೆನ್‌ ಮೇಕ್ಸ್‌ ಎ ಪ್ಲ್ಯಾನ್‌ʼ ಎಂಬ ಪುಸ್ತಕವನ್ನು ಮುಂಬೈನಲ್ಲಿ ಬಿಡುಗಡೆ ಮಾಡಲಿದ್ದಾರೆ. ಹೀಗಾಗಿ ಪುಸ್ತಕ ಲಾಂಚ್‌ ಮಾಡುವ ಮುನ್ನ ಮಾಯೆ ಮಸ್ಕ್‌ ಅವರು ಸಿದ್ಧಿ ವಿನಾಯಕನ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ಜಾಕ್ವೆಲಿನ್ ಕೂಡ ಸಾಥ್‌ ನೀಡಿದ್ದಾರೆ.

ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಾಕ್ವೆಲಿನ್ ಅವರ ತಾಯಿ ಕಿಮ್ ಫರ್ನಾಂಡಿಸ್ ಏ.6ರಂದು ನಿಧನರಾದರು. ಅಮ್ಮನ ಅಗಲಿಕೆಯ ನೋವಿನ ನಡುವೆ ಮತ್ತೆ ಸಿನಿಮಾ ಕೆಲಸದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.