ಲೈಗರ್ ಬ್ಯೂಟಿ ಜೊತೆ ಹಸೆಮಣೆ ಏರಲಿದ್ದಾರೆ `ಆಶಿಕಿ 2′ ಹೀರೋ

ಚಿತ್ರರಂಗದಲ್ಲಿ ಗಟ್ಟಿಮೇಳ ಸೌಂಡ್ ಜೋರಾಗಿದೆ. ಸಾಲು ಸಾಲಾಗಿ ನಟ- ನಟಿಯರು ಹಸೆಮಣೆ ಏರುತ್ತಿದ್ದಾರೆ. ಇದೀಗ ಬಾಲಿವುಡ್‌ನ ಮತ್ತೊಂದು ಜೋಡಿ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಅಥಿಯಾ ಶೆಟ್ಟಿ-ರಾಹುಲ್, ಕಿಯಾರಾ- ಸಿದ್ ಜೋಡಿಯ ಅದ್ದೂರಿ ಮದುವೆ ನಂತರ ಆದಿತ್ಯ ರಾಯ್ ಕಪೂರ್ (Aditya Roy Kapoor) ಮತ್ತು ಅನನ್ಯಾ ಪಾಂಡೆ (Ananya Panday) ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.

ಆದಿತ್ಯ ಕಪೂರ್ ಮತ್ತು ಅನನ್ಯಾ ಪಾಂಡೆ ಇಬ್ಬರು ಸ್ಟಾರ್ ಕಿಡ್ಸ್ ಆಗಿದ್ದರು ಕೂಡ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. `ಆಶಿಕಿ 2′ (Aashiqui 2) ಚಿತ್ರದಲ್ಲಿ ಗಮನ ಸೆಳೆದ ಆದಿತ್ಯ, ತಮ್ಮ ವೃತ್ತಿ ಜೀವನದಲ್ಲಿ ಒಂದೊಳ್ಳೆ ಬ್ರೇಕ್‌ಗಾಗಿ ಕಾಯ್ತಿದ್ದಾರೆ. ಹೀಗಿರುವಾಗ `ಲೈಗರ್’ (Liger) ನಟಿ ಜೊತೆ ಆದಿತ್ಯ ಹೆಸರು ಕೇಳಿ ಬರುತ್ತಿದೆ. ಸಾಕಷ್ಟು ವರ್ಷಗಳಿಂದ ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ. ಇದನ್ನೂ ಓದಿ: ಆಸ್ಕರ್‌ನಲ್ಲಿ ಜ್ಯೂ.ಎನ್‌ಟಿಆರ್-ಚರಣ್ ಡ್ಯಾನ್ಸ್ ಮಾಡಿಲ್ಲ ಯಾಕೆ? ಇಲ್ಲಿದೆ ಅಸಲಿ ಕಾರಣ

ಸಾಕಷ್ಟು ವರ್ಷಗಳಿಂದ ಆದಿತ್ಯ- ಅನನ್ಯಾ ಪಾಂಡೆ ಇಬ್ಬರು ಪರಿಚಿತರು. ಈ ಪರಿಚಯವೇ ಪ್ರೀತಿಗೆ ತಿರುಗಿ ಸದ್ಯದಲ್ಲೇ ಹಸೆಮಣೆ ಏರುತ್ತಿದ್ದಾರೆ ಎಂದು ಹೇಳುಲಾಗುತ್ತಿದೆ. ಬಾಲಿವುಡ್ (Bollywood) ಅಂಗಳದಲ್ಲಿ ಸದ್ಯ ಅನನ್ಯಾ ಮತ್ತು ಆದಿತ್ಯ ಮದುವೆ ಸುದ್ದಿಯೇ ಸಖತ್ ಚರ್ಚೆಯಾಗುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತಹ ಇಬ್ಬರ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇತ್ತೀಚಿಗೆ ಖಾಸಗಿ ಇವೆಂಟ್‌ವೊಂದರಲ್ಲಿ ಇಬ್ಬರು ಜೊತೆಯಾಗಿ ರ‍್ಯಾಂಪ್ ವಾಕ್ ಮಾಡಿದ್ದಾರೆ. ಜೋಡಿಯಾಗಿ ಹಲವು ಇವೆಂಟ್‌ನಲ್ಲಿ ಭಾಗಿಯಾಗುತ್ತಿದ್ದಾರೆ. `ಲೈಗರ್’ ಸೋಲಿನ ಸುಳಿಯಲ್ಲಿರುವ ನಟಿ ಅನನ್ಯಾ ಅವರು ಮದುವೆ ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಬಿಟೌನ್‌ ಸಿನಿಪಂಡಿತರ ಪ್ರಕಾರ ಈ ವರ್ಷದ ಕೊನೆಯಲ್ಲಿ ದಾಂಪತ್ಯ ಬದುಕಿಗೆ ಕಾಲಿಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಕಾದುನೋಡಬೇಕಿದೆ.

Comments

Leave a Reply

Your email address will not be published. Required fields are marked *