ಎರಡು ತಿಂಗಳ ಹಿಂದೆಯೇ ತಾಯಿಯಾಗಿದ್ದ ಆಲಿಯಾ ಭಟ್!

ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ತಾವು ತಾಯಿಯಾಗುತ್ತಿರುವ ಗುಡ್ ನ್ಯೂಸ್ ಕೊಟ್ಟ ಮೇಲೆ ಮತ್ತಷ್ಟು ಸುದ್ದಿಯಲ್ಲಿದ್ದಾರೆ. ಮದುವೆಗೂ ಮುನ್ನವೇ ಆಲಿಯಾ ಭಟ್ ಗರ್ಭಿಣಿಯಾಗಿದ್ದು, ಈ ವಿಚಾರ ಕುಟುಂಬದವರಿಗಷ್ಟೇ ತಿಳಿದಿತ್ತು ಎನ್ನಲಾಗುತ್ತಿದೆ. ಈ ಕುರಿತು ಆಲಿಯಾ ಮದುವೆಗೂ ಮುಂಚೆಯೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿರುವ ಪೋಸ್ಟ್ ಈಗ ಸಖತ್ ವೈರಲ್ ಆಗುತ್ತಿದೆ.

ಆಲಿಯಾ ಭಟ್ ಮತ್ತು ರಣ್‌ಬೀರ್ ಕಪೂರ್ ಸಾಕಷ್ಟು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು. ಆ ನಂತರ ಗುರುಹಿರಿಯರ ಸಮ್ಮುಖದಲ್ಲಿ ಏಪ್ರಿಲ್ 14ರಂದು ಮದುವೆಯಾಗಿದ್ದರು. ಇತ್ತೀಚೆಗಷ್ಟೇ ನಟಿ ಆಲಿಯಾ ತಾವು ತಾಯಿಯಾಗುತ್ತಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಇದೀಗ ಆಲಿಯಾ ಮದುವೆಯ ಮುಂಚೆಯೇ ತಾಯಿಯಾಗಿದ್ದರು ಎನ್ನಲಾಗುತ್ತಿದೆ.

ಮದುವೆಯಾಗಿ ಎರಡೂವರೆ ತಿಂಗಳ ನಂತರ ಇದೀಗ ಗರ್ಭಿಣಿ ಆಗಿರುವ ವಿಚಾರ ಆಲಿಯಾ ತಿಳಿಸಿದ್ದಾರೆ. ತೆರೆ ಹಿಂದಿನ ಅಸಲಿ ಕಥೆ ಬೇರೆಯದ್ದೇ ಇದೆ ಎನ್ನಲಾಗುತ್ತಿದೆ. ಆಲಿಯಾ ಮದುವೆಗೂ ಮುಂಚೆ ಗರ್ಭೀಣಿಯಾಗಿರುವುದಕ್ಕೂ ರಣ್‌ಬೀರ್ ನಿವಾಸದಲ್ಲಿ ದಿಡೀರ್ ಮದುವೆಯಾಗಿರುವುದಕ್ಕೂ ಸಂಬಂಧವಿದೆ. ಅದಕ್ಕೆ ಪೂರಕವೆಂಬಂತೆ ಖಾಸಗಿ ಪೇಜ್‌ನಲ್ಲಿ ಆಲಿಯಾ ಪ್ರೆಗ್ನೆನ್ಸಿ ಕುರಿತು ಈ ಹಿಂದೆಯೇ ವರದಿಯಾಗಿತ್ತು. ಆ ನಂತರ ಡಿಲೀಟ್ ಕೂಡ ಆಗಿತ್ತು. ಇದೀಗ ಅಂದು ಮಾಡಿದ್ದ ಪೋಸ್ಟ್‌ನ ಸ್ಕ್ರೀನ್ ಶಾಟ್‌ಗಳು ಸಖತ್ ವೈರಲ್ ಆಗುತ್ತಿದೆ. ಆಲಿಯಾ ಆಪ್ತರಿಂದ ಸುದ್ದಿ ಲೀಕ್‌ ಆಗಿತ್ತು ಎನ್ನಲಾಗುತ್ತಿದೆ.

ಆಲಿಯಾ ಮತ್ತು ರಣ್‌ಬೀರ್ ಈ ಖಾಸಗಿ ವಿಚಾರವು ಆಪ್ತರಿಗಷ್ಟೇ ತಿಳಿದಿತ್ತು. ಗೌಪ್ಯವಾಗಿಟ್ಟು ನಂತರ ರಣ್‌ಬೀರ್ ಮನೆಯಲ್ಲಿಯೇ ಮದುವೆಯಾಗಿ, ಈಗ ಎರಡೂವರೆ ತಿಂಗಳ ನಂತರ ನಟಿ ತಾಯಿಯಾಗಿದ್ದೇನೆ ಎಂದು ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ಎಲ್ಲಾ ವಿಚಾರಗಳು ನಿಜನಾ ಅಂತಾ ಕಪೂರ್ ಕುಟುಂಬದಿಂದ ಅಧಿಕೃತ ಮಾಹಿತಿ ಸಿಗುವವೆರೆಗೂ ಕಾದುನೋಡಬೇಕಿದೆ.

Live Tv

Comments

Leave a Reply

Your email address will not be published. Required fields are marked *