NTR 30: ಜ್ಯೂ.ಎನ್‌ಟಿಆರ್ ಜೊತೆ ಚಿತ್ರೀಕರಣಕ್ಕೆ ಭಾಗಿಯಾದ ಸೈಫ್ ಅಲಿ ಖಾನ್

‘ಆರ್‌ಆರ್‌ಆರ್’ (RRR) ಸೂಪರ್ ಸ್ಟಾರ್ ಜ್ಯೂ.ಎನ್‌ಟಿಆರ್ ಅವರ ಮುಂದಿನ ಸಿನಿಮಾ ‘ಎನ್‌ಟಿಆರ್ 30’ (NTR 30) ಸೆಟ್‌ಗೆ ಬಾಲಿವುಡ್‌ನ ಸ್ಟಾರ್ ನಟನ ಎಂಟ್ರಿಯಾಗಿದೆ. ತಾರಕ್ ಮುಂದೆ ಅಬ್ಬರಿಸಲು ಸೈಫ್ ಅಲಿ ಖಾನ್ (Saif Ali Khan) ಶೂಟಿಂಗ್‌ಗೆ ಭಾಗಿಯಾಗಿದ್ದಾರೆ.

ತಾರಕ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಎನ್‌ಟಿಆರ್ 30’ಗೆ ನಾಯಕಿಯಾಗಿ ಜಾನ್ವಿ ಕಪೂರ್ (Janhvi Kapoor)  ನಟಿಸುತ್ತಿದ್ದಾರೆ. ಮೊದಲ ಬಾರಿಗೆ ತೆಲುಗಿನ ಸಿನಿಮಾದಲ್ಲಿ ನಟಿಸಲು ಶ್ರೀದೇವಿ (Sridevi) ಪುತ್ರಿ ಜಾನ್ವಿ ಬಣ್ಣ ಹಚ್ಚುತ್ತಿದ್ದಾರೆ. ಇದನ್ನೂ ಓದಿ:ನಟಿ ಸಮಂತಾ ಭಗವದ್ಗೀತೆ ಪಾಠ ಮಾಡಿದ್ದು ಯಾರಿಗೆ?

ಜಾನ್ವಿ ಕಪೂರ್ ದಕ್ಷಿಣದತ್ತ ಮುಖ ಮಾಡಿದ ಬೆನ್ನಲ್ಲೇ ಬಾಲಿವುಡ್ ನಟ ಸೈಫ್ ಅಲಿ ಖಾನ್ ಕೂಡ ಎನ್‌ಟಿಆರ್ ಸಿನಿಮಾಗೆ ಎಂಟ್ರಿಯಾಗಿದ್ದಾರೆ. ಚಿತ್ರೀಕರಣಕ್ಕೆ ಭಾಗಿಯಾಗಿದ್ದಾರೆ. ತಾರಕ್- ಸೈಫ್ ಒಟ್ಟಿಗೆ ಕುಳಿತು ಮಾತುಕತೆ ಮಾಡ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್‌ಗೆ ವಿಲನ್ ಆಗಿ ಸೈಫ್ ಅಲಿ ಖಾನ್ (Saif Ali Khan) ನಟಿಸಲಿದ್ದಾರೆ. ಈ ಮೂಲಕ ಸೈಫ್ ಚಿತ್ರದಲ್ಲಿ ಅಬ್ಬರಿಸಲಿದ್ದಾರೆ. ಕೊರಟಾಲ ಶಿವ (Kortala Shiva) ನಿರ್ದೇಶನದ ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್‌ಗೆ ತೆರೆಗೆ ಅಪ್ಪಳಿಸಲಿದೆ.